ದಿನ ಭವಿಷ್ಯ: ಜುಲೈ 16, 2026

Daily Horoscope: ಇಂದು ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Jul 16, 2026 - 06:35
ದಿನ ಭವಿಷ್ಯ: ಜುಲೈ 16, 2026

ಮೇಷ:

ತಪ್ಪಿಸಿಕೊಳ್ಳಲಾರದ ಕೆಲಸಗಳು.. ದೈಹಿಕ, ಬೌದ್ಧಿಕ ಚಟುವಟಿಕೆಗಳು... ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು..ಆವಶ್ಯಕತೆಗೆ ತಕ್ಕ ನೆರವು ಸಕಾಲದಲ್ಲಿ ಲಭ್ಯ.ಗೃಹಿಣಿಯರ  ಆರೋಗ್ಯದ ಕಡೆಗೆ ಗಮನ ಇರಲಿ.ಗೆಳೆಯರ ಸೌಹಾರ್ದ ಕೂಟದಲ್ಲಿ ಭಾಗಿ.ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.

ವೃಷಭ:

ಸಣ್ಣದಾಗಿ ಕಾಣಿಸುವ ದೊಡ್ಡ ಜವಾಬ್ದಾರಿಗಳು. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ...ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ .ದೇವಿಯ ಆಲಯಕ್ಕೆ ಭೇಟಿಯಿಂದ ಶುಭ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಿಥುನ:

ಆರೋಗ್ಯಕ್ಕಾಗಿ ಆಹಾರ, ವಿಹಾರಗಳಲ್ಲಿ ಶಿಸ್ತು...  ಪರಿಸರ ಸ್ವಚ್ಛತೆಯನ್ನು ಕಾಯ್ದುಕೊಳ್ಳಿ.. ಉದ್ಯಮದಲ್ಲಿ  ಪ್ರಗತಿ ತೃಪ್ತಿಕರ. .. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ.ಗಣೇಶ ಕವಚ,ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕರ್ಕಾಟಕ:

ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ.  ಉತ್ಪಾದನೆಗಳಲ್ಲಿ   ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಗಳಿಂದ ಲಾಭ. ಪ್ರೀತಿಯ ಮಾತುಗಳಿಂದ ಮನೆಯಲ್ಲಿ ಶಾಂತಿ.ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಸಿಂಹ:

ಖಾಸಗಿ ಸಂಸ್ಥೆ ಉದ್ಯೋಗಸ್ಥರಿಗೆ ಸಮಾಧಾನ..... ಹೊಸ ಪರಿಚಯಸ್ಥರ ಸಹಾಯದಿಂದ  ವ್ಯಾಪಾರ ವೃದ್ಧಿ.. ಕಟ್ಟಡ ನಿರ್ಮಾಣ ಕಾರ್ಯ ವೇಗವೃದ್ಧಿ .ಕೃಷ್ಯುತ್ಪನ್ನ ಮೂಲಕ ಆದಾಯ ವೃದ್ಧಿ.  ಬಂಧುಗಳ ಮನೆಯ ಶುಭಕಾರ್ಯದಲ್ಲಿ ಭಾಗಿ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಕನ್ಯಾ:

ಮನೆಯಲ್ಲಿ ಶಾಂತಿ,ಸಮಾಧಾನದ ಕ್ಷಣಗಳು..  ಆತ್ಮೀಯರ ಭೇಟಿಯಿಂದ ಹರ್ಷ.. ಉದ್ಯೋಗ ಸ್ಥಾನದಲ್ಲಿ ಹೆಚ್ಚು ಸೌಲಭ್ಯ..ಉದ್ಯೋಗಾಸಕ್ತರಿಗೆ  ಆಶಾದಾಯಕ ಅವಕಾಶಗಳು.ಹಣ್ಣು, ತರಕಾರಿ ವ್ಯಾಪಾರದಲ್ಲಿ ಲಾಭ.ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.

ತುಲಾ:

ಸಾಂಸಾರಿಕ ವಲಯದಲ್ಲಿ ನಿಶ್ಚಿಂತೆ..ಪ್ರತಿಭಾವಂತರಿಗೆ ಗೌರವ ಪ್ರಾಪ್ತಿ. .. ಅಕಸ್ಮಾತ್ ಧನಾಗಮ. .. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ.ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.ಗಣೇಶ. ದ್ವಾದಶನಾಮ ಸ್ತೋತ್ರ , ಮಹಾಲಕ್ಷ್ಮಿ ಅಷ್ಟಕ ಓದಿ.

ವೃಶ್ಚಿಕ:

ಪ್ರತಿಭಾವಂತರಿಗೆ ಎಲ್ಲೆಡೆ ಗೌರವ.. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ.ಸಂಸ್ಥೆಯ ಉತ್ತರಾಧಿಕಾರ  ವಿವಾದ  ಪರಿಹಾರ.  ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ.. . ಗೃಹಿಣಿಯರ ಉದ್ಯಮ  ಉನ್ನತ ಸ್ಥಿತಿಯಲ್ಲಿ.ಗಣೇಶ ಅಷ್ಡಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಧನು:

ಸಮಯಕ್ಕೆ ತಕ್ಕಂತೆ  ಸ್ಪಂದಿಸುವುದರಿಂದ ಯಶಸ್ಸು.. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ.  ಸಣ್ಣ ಉದ್ಯಮಗಳ ಅಭಿವೃದ್ಧಿ.ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ.ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ಆದಿತ್ಯ ಹೃದಯ ಓದಿ.

ಮಕರ:

ಉದ್ಯೋಗ ಸ್ಥಾನದಲ್ಲಿ ಗೌರವ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ... ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.ಬೌದ್ಧಿಕ ಕಾರ್ಯಗಳಿಂದ ನೆಮ್ಮದಿ.ಗಣೇಶ ಕವಚ, ದೇವೀಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ.. . ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ   ಭೇಟಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ.   ಅಪರಿಚಿತ  ವ್ಯಕ್ತಿಗಳಿಂದ  ಅನಿರೀಕ್ಷಿತ ಸಹಾಯ.  .ವ್ಯವಹಾರ ಸುಧಾರಣೆಗೆ ಪ್ರಭಾವಿಗಳ ಸಹಾಯ.ಗಣೇಶ ದ್ವಾದಶನಾಮ ಸ್ತೋರ್ರ,  ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.