ಪುತ್ತೂರು: ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಎನ್‌ಡಿಎ ತರಗತಿ ಉದ್ಘಾಟನೆ

ನಟ‍್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ‍್ಯಾಲಯದ ನಟ‍್ಟೋಜ ಶಿವಾನಂದ ರಾವ್-ಸುಶೀಲಾ ರಾವ್ ಸಭಾಂಗಣದಲ‍್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ(NDA) ಕೋಚಿಂಗ್ ತರಗತಿಗಳನ‍್ನು ಉದ‍್ಘಾಟಿಸಲಾಯಿತು.

Jul 14, 2026 - 21:48
Jul 15, 2026 - 14:20
ಪುತ್ತೂರು: ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಎನ್‌ಡಿಎ ತರಗತಿ ಉದ್ಘಾಟನೆ

ಪುತ್ತೂರು: ಭಾರತವು ಸಾವಿರಾರು ವರ್ಷಗಳ ಶ್ರೀಮಂತ ಸಂಸ್ಕೃತಿ, ಮೌಲ್ಯ & ಪರಂಪರೆ ಹೊಂದಿರುವ ದೇಶವಾಗಿದೆ. ಈ ಸಂಸ್ಕೃತಿ ಹಾಗೂ ರಾಷ್ಟ್ರದ ಅಖಂಡತೆಯನ‍್ನು ಕಾಪಾಡುವ ಮಹತ್ತರ ಜವಾಬ‍್ದಾರಿ ಯವಜನರ ಮೇಲಿದೆ. ನ‍್ಯಾಷನಲ್‌ ಅಕಾಡೆಮಿ ಎಂಬುದು ಕೇವಲ ಉದ‍್ಯೋಗದ ಅವಕಾಶವಲ್ಲ. ಅದು ರಾಷ್ಟ್ರ ಸೇವೆ, ಶಿಸ‍್ತು, ತ‍್ಯಾಗ, ನಾಯಕತ್ವ ಮತ‍್ತು ದೇಶಭಕ‍್ತಿಯ ಜೀವನ ಮಾರ್ಗವಾಗಿದೆ ಎಂದು ನಿವೃತ್ತ ಲೆಫ‍್ಟಿನೆಂಟ್ ಕರ್ನಲ್‌ ಗೋಪಾಲಕೃಷ್ಣ ಭಟ್ ದಿವಾಣ ಹೇಳಿದರು.

ನಗರದ ನಟ‍್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ‍್ಯಾಲಯದ ನಟ‍್ಟೋಜ ಶಿವಾನಂದ ರಾವ್-ಸುಶೀಲಾ ರಾವ್ ಸಭಾಂಗಣದಲ‍್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (NDA) ಕೋಚಿಂಗ್ ತರಗತಿಗಳನ‍್ನು ಉದ‍್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ‍್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ‍್ಟೋಜ ಮಾತನಾಡಿ, ದೇಶ ಮೊದಲು ಎಂಬ ದ್ಯೇಯದೊಂದಿಗೆ ನಾವು ರಾಷ್ಟ್ರಸೇವೆ, ಶಿಸ‍್ತು ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಂಸ‍್ಕಾರ, ದೇಶಭಕ‍್ತಿ, ಸೇವಾ ಮನೋಭಾವ ಮತ‍್ತು ಶಿಸ್ತನ‍್ನು ವಿದ‍್ಯಾರ್ಥಿಗಳಲ‍್ಲಿ ಬೆಳೆಸಿದಾಗ ಸಮಾಜಕ‍್ಕೆ ಉತ್ತಮ ನಾಗರಿಕರು ಹಾಗೂ ರಾಷ್ಟ್ರಕ್ಕೆ ಸಮರ್ಥ ನೇತಾರರು ದೊರೆಯತ‍್ತಾರೆ. ಎನ್‍ಡಿಎ ತರಗತಿಗಳ ಆರಂಭವು ವಿದ‍್ಯಾರ್ಥಿಗಳಲ‍್ಲಿ ಆತ್ಮವಿಶ‍್ವಾಸ, ನಾಯಕತ್ವ ಗುಣ ಮತ‍್ತು ದೇಶ ಸೇವೆಯ ಮನೋಭಾವವನ‍್ನು ಬೆಳೆಸುವ ಮಹತ್ವದ ಹೆಜ‍್ಜೆಯಾಗಿದೆ ಎಂದು ತಿಳಿಸಿದರು.  

ಅಂಬಿಕಾ ಸಮೂಹ ಶಿಕ್ಷಣ ಸಂಸ‍್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ‍್ಟೋಜ, ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ‍್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್, ಉಪಪ್ರಾಂಶುಪಾಲ ಪ್ರದೀಪ್ ಕೆ.ವೈ ಉಪಸ‍್ಥಿತರಿದ್ದರು. ವಿದ‍್ಯಾರ್ಥಿನಿ ಸ‍್ನೇಹಾ ಪಿ.ರಾವ್ ಹಾಗೂ ಧನ್ಯಶ್ರೀ ಪ್ರಾರ್ಥಿಸಿದರು. ಥಾನ್ಯ ಕೆ ಗೋಳ್ವರ್ಕರ್ ಸ‍್ವಾಗತಿಸಿದರು. ಇಂಚರಾ ಬಿ.ಡಿ ಅತಿಥಿ ಪರಿಚಯ ಮಾಡಿಕೊಟ್ಟರು. ಹಿತೈಷಿಣಿ ಎಸ್. ವಂದನಾರ್ಪಣೆ ಸಲ‍್ಲಿಸಿದರು. ಮನ‍್ವಿತಾ ಎಂ ನಿರೂಪಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.