FIFA-2026: ಇಂಗ್ಲೆಂಡ್‌.. ಅರ್ಜೆಂಟಿನಾ ಸೆಮಿಫೈನಲ್‌ಗೆ ಎಂಟ್ರಿ

FIFA-2026: 3 And 4th Quarterfinal Result: ಫಿಫಾ ವಿಶ್ವಕಪ್‌ನ 3 ಹಾಗೂ 4ನೇ ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಇಂಗ್ಲೆಂಡ್‌ ಹಾಗೂ ಅರ್ಜೆಂಟಿನಾ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

Jul 12, 2026 - 14:33
FIFA-2026: ಇಂಗ್ಲೆಂಡ್‌.. ಅರ್ಜೆಂಟಿನಾ ಸೆಮಿಫೈನಲ್‌ಗೆ ಎಂಟ್ರಿ

ಅಮೆರಿಕ: ಫಿಫಾ ವಿಶ್ವಕಪ್‌ನ 3 ಹಾಗೂ 4ನೇ ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ (ಶನಿವಾರ) ಅದ್ದೂರಿಯಾಗಿ ತೆರೆ ಬಿದ್ದಿದೆ. 
 
3ನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಾರ್ವೆ ವಿರುದ್ಧ ಇಂಗ್ಲೆಂಡ್ ಜಯ ಗಳಿಸಿದ್ದು, 2-1 ಗೋಲುಗಳ ಅಂತರದಲ್ಲಿ ಈ ಪಂದ್ಯವನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 
 
ಮೊದಲರ್ಧದಲ್ಲಿ ನಾರ್ವೆ ಸಂಪೂರ್ಣ ಹಿಡಿತ ಸಾಧಿಸಲು ಪ್ರಯತ್ನಿಸಿತು. ಆ್ಯಂಡ್ರಿಯಾಸ್ ಶೇಲ್ಡೆರಪ್ ಒಂದು ಗೋಲು ಬಾರಿಸಿ, ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆ ಬಳಿಕ, ಇಂಗ್ಲೆಂಡ್ ಕಂಬ್ಯಾಕ್ ಮಾಡಿತು. ಜೂಡ್ ಬೆಲ್ಲಿಂಗ್‌ಹ್ಯಾಂ ಅಬ್ಬರಿಸಿದರು. 47 ಹಾಗೂ 93ನೇ ನಿಮಿಷದಲ್ಲಿ ಎರಡು ಅದ್ಭುತ ಗೋಲುಗಳನ್ನು ಹೊಡೆದರು.
 
4ನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್ಲ್ಯಾಂಡ್ ವಿರುದ್ಧ ಅರ್ಜೆಂಟಿನಾ 3-1 ಗೋಲುಗಳ ಅಂತರದಲ್ಲಿ ಜಯಿಸಿದೆ. ಇದರೊಂದಿಗೆ ಸೆಮಿಫೈನಲ್‌ನ್ನು ಪ್ರವೇಶಿಸಿದೆ. 
 
10ನೇ ನಿಮಿಷದಲ್ಲಿ ಅರ್ಜೆಂಟಿನಾದ ಅಲೆಕ್ಸಿಸ್ ಮ್ಯಾಕ್ ಅಲ್ಲಿಸ್ಟರ್, ಮೊದಲ ಗೋಲು ಗಳಿಸಿದರು. ಆ ಬಳಿಕ, ಸ್ವಿಟ್ಜರ್ಲ್ಯಾಂಡ್ ಆಟಗಾರ ಡನ್ ಎನ್ಡೊಯೆ 67ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ 1-1 ಅಂಕಗಳೊಂದಿಗೆ ಸಮಬಲಗೊಳಿಸಿದರು. ಅರ್ಜೆಂಟಿನಾ ಕೂಡ ಕಂಬ್ಯಾಕ್ ಮಾಡಿತು. ಜೂಲಿಯನ್ ಅಲ್ವರೆಜ್ ಹಾಗೂ ಲೌಟಾರೋ ಮಾರ್ಟಿನೆಜ್ ತಲಾ ಒಂದು ಗೋಲು ಸಿಡಿಸಿದರು. 
 
ಸೆಮಿಫೈನಲ್‌ಗೆ ವೇಳಾಪಟ್ಟಿ ನಿಗದಿ (ಭಾರತೀಯ ಕಾಲಮಾನ):
 
ಜುಲೈ 15 ರಂದು ಬೆಳ್ಳಗೆ 12:30 ಗಂಟೆಗೆ ಮೊದಲ ಸೆಮಿಫೈನಲ್‌ ಪಂದ್ಯ ನಿಗದಿಯಾಗಿದ್ದು, ಫ್ರಾನ್ಸ್ ಮತ್ತು ಸ್ಪೇನ್ ಸೆಣಸಲಿವೆ. ಜುಲೈ 16ರ ಬೆಳ್ಳಗೆ 12:30ಕ್ಕೆ ಎರಡನೇ ಸೆಮಿಫೈನಲ್‌ ಪಂದ್ಯ ಆಯೋಜನೆಗೊಂಡಿದ್ದು, ಇಂಗ್ಲೆಂಡ್ ಹಾಗೂ ಅರ್ಜೆಂಟಿನಾ ತಂಡಗಳು ಮುಖಾಮುಖಿಯಾಗಲಿವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.