ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ 'ದೃಶ್ಯಂ 3'

Drishyam-3 Completed 50 Days, Details: ಮಲಯಾಳಂನ ಸೂಪರ್-ಹಿಟ್ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಚಿತ್ರ 'ದೃಶ್ಯಂ 3' 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

Jul 10, 2026 - 14:23
ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ 'ದೃಶ್ಯಂ 3'

ಕೊಚ್ಚಿ: ಮಲಯಾಳಂನ ಸೂಪರ್ ಹಿಟ್ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಚಿತ್ರ 'ದೃಶ್ಯಂ 3'ಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಸದ್ಯ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಈ ಸಿನಿಮಾ ಮೇ 21 ರಂದು ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲೂ ಅಬ್ಬರಿಸಿದ್ದು, ವಿಶ್ವದಾದ್ಯಂತ ರೂ.241.92 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಜೂನ್ 18 ರಿಂದ 'ಅಮೆಜಾನ್ ಪ್ರೈಮ್'ನಲ್ಲೂ ಸ್ಕ್ರಿಮಿಂಗ್ ಆಗುತ್ತದೆ.

ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಹಾಗೂ ಆಶಾ ಶರತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೀತು ಜೋಸೆಫ್ ಆಕ್ಷನ್ ಕಾರ್ ಹೇಳಿದ್ದಾರೆ. ಅನಿಲ್ ಜಾನ್ಸನ್ ಸಂಗೀತ ನೀಡಿದ್ದು, ಆಶೀರ್ವಾದ್ ಸಿನಿಮಾಸ್ ಬ್ಯಾನರ್‌‌ನಡಿ ನಿರ್ಮಾಣ ಮಾಡಲಾಗಿದೆ. 

ಜಾರ್ಜ್‌ಕುಟ್ಟಿ ಹಾಗೂ ಆತನ ಕುಟುಂಬದ ಕಥೆಯ ಮುಂದುವರಿದ ಭಾಗವನ್ನು ಆಧರಿಸಿದ್ದು, ಈ ಸಿನಿಮಾದ ರೋಮಾಂಚನಕಾರಿ ಸನ್ನಿವೇಶಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.