RRB: 6,557 ಟೆಕ್ನಿಷಿಯನ್ ಹುದ್ದೆಗೆ ಅರ್ಜಿ

RRB Technician Recruitment 2026, Total 6557 Vacancies: ರೈಲ್ವೆ ನೇಮಕಾತಿ ಮಂಡಳಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಒಟ್ಟು 6,557 ಟೆಕ್ನಿಷಿಯನ್ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

Jul 10, 2026 - 11:32
Jul 10, 2026 - 11:41
RRB: 6,557 ಟೆಕ್ನಿಷಿಯನ್ ಹುದ್ದೆಗೆ ಅರ್ಜಿ

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ (RRB), ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಒಟ್ಟು 6,557 ಟೆಕ್ನಿಷಿಯನ್ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 

ಹುದ್ದೆಗಳ ಸಂಖ್ಯೆ:
 
ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ ವಿಭಾಗದಲ್ಲಿ 323 ಮತ್ತು ಟೆಕ್ನಿಷಿಯನ್ ಗ್ರೇಡ್-III ವಿಭಾಗದಲ್ಲಿ 6,234 ಹುದ್ದೆಗಳನ್ನು ತುಂಬಲಾಗುತ್ತದೆ. 

ವಿದ್ಯಾರ್ಹತೆ:

ಟೆಕ್ನಿಷಿಯನ್ ಗ್ರೇಡ್-I ಹುದ್ದೆಗೆ ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಎಸ್ಸಿ ಅಥವಾ ಎಂಜಿನಿಯರಿಂಗ್ ಪದವಿ/ ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಟೆಕ್ನಿಷಿಯನ್ ಗ್ರೇಡ್-III ಹುದ್ದೆಗೆ 10ನೇ ತರಗತಿಯೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: 

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗಿದೆ. 

ವೇತನ:

ಟೆಕ್ನಿಷಿಯನ್ ಗ್ರೇಡ್-I ಹುದ್ದೆಗೆ ರೂ.29,200 ಮತ್ತು ಟೆಕ್ನಿಷಿಯನ್ ಗ್ರೇಡ್-III ಹುದ್ದೆಗೆ ರೂ.ರೂ.29,200 ಮೂಲ ವೇತನ ನೀಡಲಾಗುತ್ತದೆ. 

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 29 ಕಡೆ ದಿನವಾಗಿದೆ. ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳಿಗೆ ರೂ.500 ಮತ್ತು ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಮಹಿಳಾ ಅಭ್ಯರ್ಥಿಗಳಿಗೆ ರೂ.250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. 

ಹೆಚ್ಚಿನ ಮಾಹಿತಿಗೆ https://www.rrbapply.gov.inಗೆ ಸಂಪರ್ಕಿಸಿರಿ.