ಯಾಸ್ತಿಕಾ ಭಾಟಿಯಾ ಹೊಸ ದಾಖಲೆ

Yastika Bhatia New Record In Test Cricket: 'ಕ್ರಿಕೆಟ್‌ ಕಾಶಿ' ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ವಿಕೆಟ್ ಕೀಪರ್ - ಬ್ಯಾಟ್ಸರ್ ಯಾಸ್ತಿಕಾ ಭಾಟಿಯಾ ಹೊಸ ಇತಿಹಾಸ ಬರೆದಿದ್ದಾರೆ.

Jul 13, 2026 - 16:32
ಯಾಸ್ತಿಕಾ ಭಾಟಿಯಾ ಹೊಸ ದಾಖಲೆ

ಇಂಗ್ಲೆಂಡ್: 'ಕ್ರಿಕೆಟ್‌ ಕಾಶಿ' ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ವಿಕೆಟ್ ಕೀಪರ್ - ಬ್ಯಾಟ್ಸರ್ ಯಾಸ್ತಿಕಾ ಭಾಟಿಯಾ ಹೊಸ ಇತಿಹಾಸ ಬರೆದಿದ್ದಾರೆ. ಭಾನುವಾರ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಜರುಗಿದ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಈ ಮೈದಾನದಲ್ಲಿ 142 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ 'ಮಹಿಳಾ ಟೆಸ್ಟ್' ಪಂದ್ಯವೊಂದು ನಡೆಯುತ್ತಿದೆ. ಯಾಸ್ತಿಕಾ, 158 ಎಸೆತಗಳಲ್ಲಿ 113 ರನ್‌ ಗಳಿಸಿ, ಔಟಾದರು. 

ಕಳೆದ ವರ್ಷ (2025) ಯಾಸ್ತಿಕಾ ಭಾಟಿಯಾ ಅವರ ಮೊಣಕಾಲಿಗೆ ಗಾಯವಾಗಿತ್ತು. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ದೀರ್ಘಾವಧಿ ವಿಶ್ರಾಂತಿ ಬಳಿಕ, ಕಂಬ್ಯಾಕ್ ಮಾಡಿ, ಈ ವಿಶಿಷ್ಟ ದಾಖಲೆ ಮಾಡಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.