FiFA-2026: ಫ್ರಾನ್ಸ್‌ಗೆ ಭರ್ಜರಿ ಜಯ.. ಸೆಮಿಫೈನಲ್‌ಗೆ ಲಗ್ಗೆ

FiFA-2026: France Win, Entering Semi-Finals: ಫಿಫಾ ವಿಶ್ವಕಪ್‌ನ ಮೊದಲ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಗೆದ್ದು ಬೀಗದ್ದು, ಸೆಮಿಫೈನಲ್‌ನ್ನು ಪ್ರವೇಶಿಸಿದೆ.

Jul 10, 2026 - 14:05
FiFA-2026: ಫ್ರಾನ್ಸ್‌ಗೆ ಭರ್ಜರಿ ಜಯ.. ಸೆಮಿಫೈನಲ್‌ಗೆ ಲಗ್ಗೆ

ಅಮೆರಿಕ: ಇಲ್ಲಿನ ಬೋಸ್ಟನ್‌ನ ಜಿಲೆಟ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್‌ನ ಮೊದಲ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ (ಗುರುವಾರ) ಫ್ರಾನ್ಸ್ ಗೆದ್ದು ಬೀಗಿದೆ. ಮೊರಾಕೊ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯಿಸಿದೆ. ಇದರೊಂದಿಗೆ ಸೆಮಿಫೈನಲ್‌ಗೂ ಅಧಿಕೃತವಾಗಿ ಪ್ರವೇಶಿಸಿದೆ. 

ಮೊದಲರ್ಧವು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳಿಗೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಫ್ರಾನ್ಸ್‌ ಕಂಬ್ಯಾಕ್ ಮಾಡಿತು. 60ನೇ ನಿಮಿಷದಲ್ಲಿ ಕೈಲಿಯನ್ ಎಂಬಾಪ್ಪೆ &  66ನೇ ನಿಮಿಷದಲ್ಲಿ ಔಸ್ಮೇನ್ ಡೆಂಬೆಲೆ ತಲಾ ಒಂದು ಗೋಲು ಬಾರಿಸಿ, ತಮ್ಮ ತಂಡಕ್ಕೆ  ಜಯ ತಂದುಕೊಟ್ಟರು. 

ಈ ಗೆಲುವಿನೊಂದಿಗೆ ಫ್ರಾನ್ಸ್ ನಾಯಕ ಕೈಲಿಯನ್ ಎಂಬಾಪೆ, ಪ್ರಸಕ್ತ ಟೂರ್ನಿಯಲ್ಲಿ 8ನೇ ಗೋಲು ಬಾರಿಸುವುದರೊಂದಿಗೆ 'ಗೋಲ್ಡನ್ ಬೂಟ್' ಪ್ರಶಸ್ತಿ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಎರಡನೇ  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಹಾಗೂ ಬೆಲ್ಜಿಯಂ ತಂಡಗಳು ಸೆಣಸಲಿವೆ. ಈ ಪಂದ್ಯವು ಜುಲೈ 11ರ ಬೆಳಗ್ಗೆ 12:30 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.