FIFA-2026: ಸ್ಪೇನ್‌ಗೆ ಗೆಲುವು, ಸೆಮಿಫೈನಲ್‌ಗೆ ಪ್ರವೇಶ

FIFA-2026: Spain Win, Entering Semi-Finals: ಫಿಫಾ ವಿಶ್ವಕಪ್‌ನ 2ನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸ್ಪೇನ್‌ ಗೆಲುವು ಸಾಧಿಸಿದೆ.

Jul 11, 2026 - 14:29
Jul 11, 2026 - 14:31
FIFA-2026: ಸ್ಪೇನ್‌ಗೆ ಗೆಲುವು, ಸೆಮಿಫೈನಲ್‌ಗೆ ಪ್ರವೇಶ

ಅಮೆರಿಕ: ಇಲ್ಲಿನ ಟೆಕ್ಸಾಸ್‌ನ ಎಟಿ&ಟಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್‌ನ 2ನೇ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ (ಶುಕ್ರವಾರ) ಬೆಲ್ಜಿಯಂ ವಿರುದ್ಧ ಸ್ಪೇನ್‌ ಗೆಲುವು ಸಾಧಿಸಿದೆ. 2-1 ಗೋಲುಗಳ ಅಂತರದಲ್ಲಿ ಜಯಿಸಿದ್ದು, ಸೆಮಿಫೈನಲ್‌ನ್ನು ಪ್ರವೇಶಸಿದೆ.
 
ಈ ಪಂದ್ಯದ ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. 30ನೇ ನಿಮಿಷದಲ್ಲಿ ಸ್ಪೇನ್‌ನ ಫ್ಯಾಬಿಯಾನ್ ರೂಯಿಜ್, ಮೊದಲ ಗೋಲು ಬಾರಿಸಿ, ತಮ್ಮ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. 41ನೇ ನಿಮಿಷದಲ್ಲಿ ಬೆಲ್ಜಿಯಂ ಪರ ಚಾರ್ಲ್ಸ್ ಡೆ ಕೆಟೆಲೇರೆ, ಮತ್ತೊಂದು ಗೋಲು ಗಳಿಸಿ, ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ಆ ನಂತರ, 88ನೇ ನಿಮಿಷದಲ್ಲಿ ಸ್ಪೇನ್‌ನ ಮಿಕೆಲ್ ಮೆರಿನೊ, ವಿಜಯದ ಗೋಲು ಹೊಡೆದರು. 
 
 
'ಗುಂಪು ಹೆಚ್' ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಸ್ಪೇನ್‌, ರೌಂಡ್-ಆಫ್ 32 ಹಂತದಲ್ಲಿ ಆಸ್ಟ್ರಿಯಾ ಎದುರಿಗೆ 3–0 ಗೋಲುಗಳ ಅಂತರದಲ್ಲಿ ಗೆಲುವು ಕಂಡಿತ್ತು. ರೌಂಡ್-ಆಫ್ 16 ಹಂತದಲ್ಲಿ ಪೋರ್ಚುಗಲ್ ವಿರುದ್ಧ 1–0 ಗೋಲುಗಳ ಅಂತರದಲ್ಲಿ ಜಯಿಸಿತ್ತು.   
ಎರಡು ಪಂದ್ಯ:
ನಾಳೆ (ಜುಲೈ 12) ಬೆಳಗ್ಗೆ 2:30ಕ್ಕೆ 3ನೇ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ನಾರ್ವೆ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಂದೇ 4ನೇ ಕ್ವಾರ್ಟರ್ ಫೈನಲ್ ಪಂದ್ಯವು ಆಯೋಜನೆಗೊಂಡಿದ್ದು, ಬೆಳಗ್ಗೆ 6:30ಕ್ಕೆ ಶುರುವಾಗಲಿದೆ. ಅರ್ಜೆಂಟಿನಾ ಮತ್ತು ಸ್ವಿಟ್ಜರ್ಲ್ಯಾಂಡ್ ಸೆಣಸಲಿವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.