ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರ: ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ

Shri Sharadamba Bhajana Mandir Panja: Donation Collection Pamphlet Released: ಪಂಜದ ಶ್ರೀ ಶಾರದಾಂಬ ಭಜನಾ ಮಂದಿರಕ್ಕೆ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

Jul 12, 2026 - 15:17
Jul 12, 2026 - 15:23
ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರ: ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ

ಸುಳ್ಯ/ಪುತ್ತೂರು: ಪಂಜದ ಶ್ರೀ ಶಾರದಾಂಬ ಭಜನಾ ಮಂದಿರಕ್ಕೆ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. 
 
ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರು, ಈ ಕರಪತ್ರವನ್ನು ಹೊರತಂದರು. ಪ್ರಥಮ ದೇಣಿಗೆಯನ್ನು ನೀಡಿ, ಶುಭ ಹಾರೈಸಿದರು.
 
ಈ ವೇಳೆ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ, ನಿವೇಶನ ಖರೀದಿ ಸಂಚಾಲಕ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಗುರುಪ್ರಸಾದ್ ತೋಟ, ರಾಜಕುಮಾರ್ ಬೇರ್ಯ, ಕುಶಾಲಪ್ಪ ನೆಲ್ಲಿಕಟ್ಟೆ, ಶಿವಪ್ಪ ಸಂಕಡ್ಕ, ಜಿನ್ನಪ್ಪ ಗೌಡ ಗುಂಡಡ್ಕ, ವೀಣಾ ನಾರಾಯಣ ಪಂಜ ಹಾಗೂ ಶಾರದಂಬಾ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.