ಎಡಮಂಗಲ: ಶಾಲೆಗೆ ಡಯಾಸ್ ಹಸ್ತಾಂತರ
Sulya: Edamangala School, Dias Handed Over: ಎಡಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಯಾಸ್ ಹಸ್ತಾಂತರ ಹಾಗೂ ವಿದ್ಯಾರ್ಥಿಗಳಿಗೆ ಪೆನ್, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಪುತ್ತೂರು: ಎಡಮಂಗಲದಲ್ಲಿ ದಿವಂಗತ ಮಾಧವ ಗೌಡ ವೈ ಎ ಏನಡ್ಕ ಚೆನ್ನಗಿರಿ ಇವರ ಸ್ಮರಣಾರ್ಥ ಅವರ ಧರ್ಮಪತ್ನಿ ಸುನಂದಾ ಮಾಧವ ಗೌಡ ಏನಡ್ಕ ಇವರ ಕೊಡುಗೆಯಾದ ಡಯಾಸ್ ಹಸ್ತಾಂತರ ಮತ್ತು ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಮತ್ತು ಸ್ಕೆಚ್ ಪೆನ್ ವಿತರಣೆ ಕಾರ್ಯಕ್ರಮವು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಭಾಸ್ಕರ್ ಆಚಾರ್ಯ ಇವರು ವಹಿಸಿದ್ದರು. ಆನಂದ ಗೌಡ ವೈಎ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಮಾಲೇಂಗ್ರಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸುನಂದಾ ಮಾಧವ ಗೌಡ ಏನಡ್ಕ ಮತ್ತು ಕುಟುಂಬಸ್ಥರು ಡಯಾಸ್ ಅನ್ನು ಹಸ್ತಾಂತರಿಸಿದರು. ಇದೇವೇಳೆ ಮಕ್ಕಳಿಗೆ ಸಾಂಕೇತಿಕವಾಗಿ ನೋಟ್ ಪುಸ್ತಕ, ಪೆನ್ನು ಮತ್ತು ಸ್ಕೆಚ್ ಪೆನ್ನನ್ನು ವಿತರಿಸಿದರು.
