ಕರಾಟೆ: ಅಂಬಿಕಾ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಹುಮಾನ - ಪ್ರಾಂತ ಮಟ್ಟಕ್ಕೆ ಆಯ್ಕೆ

Karate: ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು, ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Aug 20, 2026 - 12:38
ಕರಾಟೆ: ಅಂಬಿಕಾ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಹುಮಾನ - ಪ್ರಾಂತ ಮಟ್ಟಕ್ಕೆ ಆಯ್ಕೆ

ಪುತ್ತೂರು: ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು, ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

17 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ, ಬೆಟ್ಟಂಪಾಡಿ ಸುರೇಶ್ ಗೌಡ ಸರಳಿಕಾನ ಹಾಗೂ ವಿದ್ಯಾಶ್ರೀ ದಂಪತಿ ಪುತ್ರಿ 10ನೇ ತರಗತಿಯ ದೃಶಾನ ಎಸ್ ಸರಳಿಕಾನ (52 ಕೆಜಿ) ಪ್ರಥಮ ಸ್ಥಾನ ಪಡೆದಿದ್ದಾರೆ. 

ಇದೇ ವಿಭಾಗದಲ್ಲಿ ವಿಟ್ಲ ನೀರಕಣಿ ನಿವಾಸಿ ಸುನಿಲ್ ರಾಜ್ ಮತ್ತು ಬಿ.ಬಿ.ವಿದ್ಯಾ ದಂಪತಿ ಪುತ್ರಿ 9ನೇ ತರಗತಿಯ ನಿಹಾರಿಕಾ ಕೆ.ಎಸ್ (56 ಕೆಜಿ) ಮೊದಲ ಬಹುಮಾನ ಪಡೆದಿದ್ದಾರೆ. 

14 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ, ಪುತ್ತೂರಿನ ಹೆಬ್ಬಾರಬೈಲು ವಿಶಾಲ್ ಹಾಗೂ  ಭೂಮಿ ದಂಪತಿ ಪುತ್ರಿ 8ನೇ ತರಗತಿಯ ಪ್ರಾರ್ಥನಾ (46 ಕೆಜಿ) ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದಾರೆ.

ಈ ಮೂವರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

14 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ, ಪುಣಚ ನಿವಾಸಿ ವಿಜಯಕುಮಾರ್ ಹಾಗೂ ಪ್ರತಿಭಾ ಕುಮಾರಿ ದಂಪತಿ ಪುತ್ರಿ 7ನೇ ತರಗತಿಯ ರೋಚನಾ ಎ (38 ಕೆಜಿ) ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.  

ಇದೇ ವಿಭಾಗದಲ್ಲಿ ಮುಕ್ರಂಪಾಡಿ ಕೃಷ್ಣ ಪ್ರಶಾಂತ ಎಸ್ ಮತ್ತು ಶ್ರುತಿ ದಂಪತಿಯ ಪುತ್ರಿ 6ನೇ ತರಗತಿಯ ಅಭಿಜ್ಞಾ (30 ಕೆಜಿ) ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. 

ಪುತ್ತೂರಿನ ಬಿ.ವಸಂತ ಗೌಡ ಹಾಗೂ ಮೀನಾಕ್ಷಿ ದಂಪತಿ ಪುತ್ರಿ 7ನೇ ತರಗತಿಯ ಶ್ರೀಯಾ ವಿ.ಎಂ (50 ಕೆಜಿ) ತೃತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ.

14 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಪುತ್ತೂರಿನ ಬೊಳುವಾರು ಸುಧೀರ್ ಕೆ.ವೈ ಮತ್ತು ಅಶ್ವಿನಿ ಎಸ್ ದಂಪತಿಯ ಪುತ್ರ 6ನೇ ತರಗತಿಯ ಶ್ರೀಯಂ ಕೆ.ಎಸ್ (50 ಕೆಜಿ) ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.