ಬಡವರ ಮಕ್ಕಳು ವಿದ್ಯಾವಂತರಾದರೆ, ಕೆಲವು ಪಕ್ಷದವರಿಗೆ ಭಯ: ಅಶೋಕ್ ರೈ

PM Shri High School Vitla: New Room Inauguration: ವಿಟ್ಲದ ಪಿಎಂ ಶ್ರೀ ಪ್ರೌಢಶಾಲೆಯ ನೂತನ ಕೊಠಡಿಯನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿರು.

Jul 12, 2026 - 12:08
ಬಡವರ ಮಕ್ಕಳು ವಿದ್ಯಾವಂತರಾದರೆ, ಕೆಲವು ಪಕ್ಷದವರಿಗೆ ಭಯ: ಅಶೋಕ್ ರೈ

ಪುತ್ತೂರು: ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕೆಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಆದರೆ, ಅವರ ವಿದ್ಯಾ ಆಂದೋಲನಕ್ಕೆ ಕೆಲವು ರಾಜಕೀಯ ಪಕ್ಷಗಳು ವಿರೋಧ ಮಾಡುತ್ತಿವೆ. ಬಡವರ ಮಕ್ಕಳು ಕಲಿತರೆ ಅವರನ್ನು ಮಂಗ ಮಾಡಲು ಆ ಪಕ್ಷದವರಿಗೆ ಸಾಧ್ಯವಾಗುವುದಿಲ್ಲ. ಅದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ವಿಟ್ಲದ ಪಿಎಂ ಶ್ರೀ ಪ್ರೌಢಶಾಲೆಯ ನೂತನ ಕೊಠಡಿಯನ್ನು ಅವರು ಉದ್ಘಾಟಿಸಿ, ಮಾತನಾಡಿದರು. ಪ್ರತಿ ಗ್ರಾಮದಲ್ಲಿ ಕೆಪಿಎಸ್ ಶಾಲೆಗಳನ್ನು  ಪ್ರಾರಂಭಿಸಲು ಯೋಜಿಸಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕನ್ನಡದ ಜೊತೆಗೆ  ಬಡವನ ಮಕ್ಕಳು, ಇಂಗ್ಲೀಷ್ ಮಾತನಾಡಬೇಕು. ಆಗ ಮಾತ್ರ ನಾವು ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನಮ್ಮ ಮಕ್ಕಳು ಕಲಿತು ವಿದ್ಯಾವಂತರಾಗಬೇಕು. ಅದಕ್ಕೆ ನಾವು ಪಣ ತೊಡಬೇಕು. ಪಟ್ಟದಲ್ಲಿ ಕೂತು ರೈಲು ಬಿಟ್ಟರೆ, ದೇಶ ಉದ್ದಾರ ಆಗುವುದಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಮಾತ್ರ ದೇಶದ ಏಳಿಗೆ ಸಾಧ್ಯವಾಗುವಂತೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ್ ನಾಯಿತೊಟ್ಟು,ರಮನಾಥ ವಿಟ್ಲ,ರವಿಶಂಕರ್, ಅಶೋಕ್ ಕುಮಾರ್ ಶೆಟ್ಟಿ, ಶಾಲೆಯ ಗೌರವಾಧ್ಯಕ್ಷ ಸುಬ್ರಾಯ ಪೈ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಫೆಲ್ಸಿಟಾ ಹಾಗೂ ಎಸ್‌ಡಿಎಂ ರವಿಶಂಕರ್ ಇತರರು ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.