ಸಾವಿರಾರು ಹಾಡುಗಳನ್ನು ಹಾಡಿದ ಗಾನ ಕೋಗಿಲೆ ಎಸ್. ಜಾನಕಿ ವಿಧಿವಶ
Legendary playback Singer S.Janaki Passed Away: ಎಸ್. ಜಾನಕಿ ಅವೆರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಿನಿಮಾ ಹಾಡುಗಳಿಂದ ಮನರಂಜಿಸಿದ್ದ ಎಸ್., ವರು ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು.
ಮೈಸೂರು: ಕೋಟ್ಯಂತರ ಕಲಾಭಿಮಾನಿಗಳ ಮನಗೆದ್ದಿದ್ದ ದಕ್ಷಿಣ ಭಾರತದ 'ಗಾನ ಕೋಗಿಲೆ', ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ಶನಿವಾರ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಹಳ್ಳಿಯ ಸೊಗಡಿನ ಜನಪದ ಗೀತೆಗಳಿಂದ ಹಿಡಿದು ಶಾಸ್ತ್ರೀಯ, ಭಾವಗೀತೆ, ಭಕ್ತಿಗೀತೆ ಹಾಗೂ ಪಾಶ್ಚಾತ್ಯ ಶೈಲಿಯ ಹಾಡುಗಳವರೆಗೆ ತಮ್ಮ ವಿಶಿಷ್ಟ ಕಂಠಸಿರಿಯಿಂದ ಜೀವ ತುಂಬಿದ್ದ ಎಸ್. ಜಾನಕಿ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗವನ್ನು ಆಳಿದ ಅಪರೂಪದ ಗಾಯಕಿಯಾಗಿದ್ದರು.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯ ಗೆದ್ದಿದ್ದ ಅವರು ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರ ನಿಧನದಿಂದ ಭಾರತೀಯ ಸಂಗೀತ ಲೋಕದ ಒಂದು ಸುವರ್ಣಯುಗ ಅಂತ್ಯವಾದಂತಾಗಿದ್ದು, ಚಿತ್ರರಂಗ ಹಾಗೂ ಸಂಗೀತಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
