ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದ ವಿದ‍್ಯಾರ್ಥಿಗಳಿಗೆ ಕಿರು ಪ್ರಬಂಧ ಸ್ಪರ್ಧೆಯಲ‍್ಲಿ ಬಹುಮಾನ

ಕಿರು ಪ್ರಬಂಧ ಸ್ಪರ್ಧೆಯಲ‍್ಲಿ ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದ ವಿದ‍್ಯಾರ್ಥಿಗಳು ಬಹುಮಾನ ಪಡೆದು ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ‍್ದಾರೆ. 10ನೇ ತರಗತಿಯ ಅನಘ್ರ್ಯಶ್ರೀ ಪ್ರಥಮ ಬಹುಮಾನ ಹಾಗೂ ಪುತ್ರ 10ನೇ ತರಗತಿಯ ದೈವಿಕ್ ಶೆಟ‍್ಟಿ ದ‍್ವಿತೀಯ ಬಹುಮಾನ ಪಡೆದಿದ‍್ದಾರೆ.

Jul 11, 2026 - 19:32
ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದ ವಿದ‍್ಯಾರ್ಥಿಗಳಿಗೆ  ಕಿರು ಪ್ರಬಂಧ ಸ್ಪರ್ಧೆಯಲ‍್ಲಿ ಬಹುಮಾನ
Ambika CBSE School, Bappalige Students Win Prizes in Short Essay Competition

ಪುತ‍್ತೂರು: "ಮಾದಕ ದ್ರವ್ಯಗಳ ದುರುಪಯೋಗ ಮತ‍್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನ-2026" ಅಂಗವಾಗಿ ವಿದ‍್ಯಾರ್ಥಿಗಳಲ‍್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ‍್ದೇಶದಿಂದ ದಕ‍್ಷಿಣ ಕನ್ನಡ ಜಿಲ‍್ಲಾ ಪೊಲೀಸ್‌, ಪುತ‍್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ‍್ತು ಹಾಗೂ ರೋಟರಿ ಕ್ಲಬ್‌ ಪುತ್ತೂರು ಇವರ ಸಂಯುಕ್ತಾಶ್ರಯದಲ‍್ಲಿ ಆಯೋಜಿಸಲಾದ ವಿದ‍್ಯಾರ್ಥಿ ವಿಭಾಗದ ಕಿರು ಪ್ರಬಂಧ ಸ್ಪರ್ಧೆಯಲ‍್ಲಿ ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದ ವಿದ‍್ಯಾರ್ಥಿಗಳು ಬಹುಮಾನ ಪಡೆದು ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ‍್ದಾರೆ. ಉದಯಕುಮಾರ್ ಎಚ್. ಮತ‍್ತು ಪಲ್ಲವಿ ಉದಯಕುಮಾರ್ ಎಚ್. ದಂಪತಿಯ ಪುತ್ರಿ 10ನೇ ತರಗತಿಯ ಅನಘ್ರ್ಯಶ್ರೀ ಪ್ರಥಮ ಬಹುಮಾನ ಹಾಗೂ ಉದಯಕುಮಾರ್ ಶೆಟ‍್ಟಿ ಮತ‍್ತು ಶೋಭಾ ಶೆಟ‍್ಟಿ ದಂಪತಿಯ ಪುತ್ರ 10ನೇ ತರಗತಿಯ ದೈವಿಕ್ ಶೆಟ‍್ಟಿ ದ‍್ವಿತೀಯ ಬಹುಮಾನ ಪಡೆದಿದ‍್ದಾರೆ.


ಹಾಗೆಯೇ, ಮೋಹನ ಗೌಡ ಎಚ್. ಮತ‍್ತು ಪ್ರಮೀಳಾ ಬಿ.ಕೆ. ದಂಪತಿಯ ಪುತ್ರ 9ನೇ ತರಗತಿಯ ಆರ್ಯ ಮೋಹನ್ ಎಚ್. ಹಾಗೂ ವಿನಯಕುಮಾರ್ ಮತ‍್ತು ಪವಿತ್ರಾ ಎಂ.ಎಸ್. ದಂಪತಿಯ ಪುತ್ರಿ ಪೂರ್ವಿ ವಿ. ಪ್ರೋತ್ಸಾಹಕ ಬಹುಮಾನ ಪಡೆದು ವಿದ‍್ಯಾಲಯಕ‍್ಕೆ ಕೀರ್ತಿ ತಂದಿದ‍್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.