Today Gold Price: ಇಂದು ಆಭರಣದ ಬೆಲೆ ಏರಿಕೆ.. ಎಷ್ಟು?

Today July 10 Gold Price Karnataka: ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ದರಗಳು ಮತ್ತೆ ಏರಿಕೆಯಾಗಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Jul 10, 2026 - 13:29
Today Gold Price: ಇಂದು ಆಭರಣದ ಬೆಲೆ ಏರಿಕೆ.. ಎಷ್ಟು?

ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ದರಗಳು ಮತ್ತೆ ಏರಿಕೆಯಾಗಿವೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. 

24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.380 ಹೆಚ್ಚಳವಾಗಿ ರೂ.1,44,820 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.350 ಏರಿಕೆಯಾಗಿ ರೂ.1,32,750ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.290 ಹೆಚ್ಚಳವಾಗಿ ರೂ.1,08,620 ಆಗಿದೆ. 

10 ಗ್ರಾಂ ಪ್ಲಾಟಿನಂ ದರ ರೂ.1,200 ಏರಿಕೆಯಾಗಿ ರೂ.49,970ಕ್ಕೆ ತಲುಪಿದೆ. 1 ಕೆಜಿ ಬೆಳ್ಳಿ ರೂ.5,000 ಹೆಚ್ಚಳವಾಗಿ ರೂ.2,40,000 ದರದಲ್ಲಿ ಮಾರಾಟವಾಗುತ್ತಿದೆ.

ಷೇರುಪೇಟೆ ವಹಿವಾಟು ಚೇತರಿಕೆ:

ಭಾರತದ ಷೇರುಪೇಟೆ ವಹಿವಾಟು ಕೂಡ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 653.81 ಅಂಕಗಳು ಏರಿಕೆಯಾಗಿ 77,395.63 ಅಂಕಗಳಿಗೆ ಬಂದಿದೆ. ನಿಫ್ಟಿ 161.9 ಹೆಚ್ಚಳವಾಗಿ 24,124.70 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 10 ಪೈಸೆಯಷ್ಟು ಸುಧಾರಿಸಿದ್ದು, ರೂ.95.29 ಇದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.