Moto G77 Power: ಹೊಸ 'ಮೋಟೋ ಜಿ77 ಪವರ್' ಫೋನ್ ಮಾರಾಟಕ್ಕೆ.. ಬೆಲೆ ಎಷ್ಟು?

Moto G77 Power smartphone Launched: ಹೊಸ 'ಮೋಟೋ ಜಿ77 ಪವರ್' ಫೋನ್ ಮಾರಾಟಕ್ಕೆ ಬಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Jul 9, 2026 - 13:19
Moto G77 Power: ಹೊಸ 'ಮೋಟೋ ಜಿ77 ಪವರ್' ಫೋನ್ ಮಾರಾಟಕ್ಕೆ.. ಬೆಲೆ ಎಷ್ಟು?

ಬೆಂಗಳೂರು: ಹೊಚ್ಚ ಹೊಸ ಮೋಟೋ ಜಿ77 ಪವರ್ (Moto G77 Power) ಸ್ಮಾರ್ಟ್‌ಫೋನ್ ಬುಧವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಜುಲೈ 13 ರಿಂದ ಮಾರಾಟವು ಶುರುವಾಗಲಿದೆ. ಇದು 8GB RAM + 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಲಭ್ಯವಿದ್ದು, ರೂ.25,999 ದರವನ್ನು ಹೊಂದಿದೆ. 
 
ಈ ಸ್ಮಾರ್ಟ್‌ಫೋನ್‌ನಲ್ಲಿ 7,000mAh ಸಾಮರ್ಥ್ಯದ ಬ್ಯಾಟರಿಯನ್ನುಒಳಗೊಂಡಿದ್ದು, ಭರ್ತಿ 59 ಗಂಟೆಗಳ ಲೈಫ್ ನೀಡುತ್ತದೆ. 30W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಹಾಗೂ 6W ರಿವರ್ಸ್ ವೈರ್ಡ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ. 
 
ಇದು 6.72-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಪ್ಯಾಂಟೋನ್ ಫ್ಯೂಷಿಯಾ ರೆಡ್, ಪ್ಯಾಂಟೋನ್ ಇಂಪೆನೆಟ್ರಬಲ್ ಮತ್ತು ಪ್ಯಾಂಟೋನ್ ನಾಟಿಕಲ್ ಬ್ಲೂ ಎಂಬ ಬಣ್ಣಗಳೊಂದಿಗೂ ಗ್ರಾಹಕರ ಖರೀದಿಗೆ ಸಿಗುತ್ತದೆ. 
 
ನೂತನ 'ಮೋಟೋ ಜಿ77 ಪವರ್' ಹಿಂಬದಿ 50MP ಕ್ಯಾಮೆರಾ ಹಾಗೂ ಸೆಲ್ಫಿಗಾಗಿ ಮುಂಭಾಗ 32MP ಕ್ಯಾಮೆರಾವನ್ನು ಪಡೆದಿದೆ. ಆಂಡ್ರಾಯ್ಡ್ 16 ಆಧಾರಿತ 'Hello UI' ಸಾಫ್ಟ್‌ವೇರ್‌ ಸಹಾಯದೊಂದಿಗೆ ಕೆಲಸ ಮಾಡುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನ್ನು ತನ್ನದಾಗಿಸಿಕೊಂಡಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.