Yamaha Aerox E: ಹೊಸ ಯಮಹಾ ಏರೋಕ್ಸ್ ಇ ಕುರಿತ ಕುರಿತ ಪ್ರಮುಖಾಂಶಗಳಿವು

Yamaha Aerox E Price, Design, Colours, Range, Features And All Details: ನೂತನ 'ಯಮಹಾ ಏರೋಕ್ಸ್ ಇ' ಎಲೆಕ್ಟ್ರಿಕ್ ಸ್ಕೂಟರ್ ಬುಧವಾರ ಬಿಡುಗಡೆಗೊಂಡಿದೆ. ಬನ್ನಿ.. ಈ ಕಾರಿನ ವಿಶೇಷತೆಗಳು ಏನೆಂಬುದನ್ನು ತಿಳಿಯೋಣ.

Jul 9, 2026 - 12:59
Yamaha Aerox E: ಹೊಸ ಯಮಹಾ ಏರೋಕ್ಸ್ ಇ ಕುರಿತ ಕುರಿತ ಪ್ರಮುಖಾಂಶಗಳಿವು

ಬೆಂಗಳೂರು: ನೂತನ ಯಮಹಾ ಏರೋಕ್ಸ್ ಇ (Yamaha Aerox E) ಎಲೆಕ್ಟ್ರಿಕ್ ಸ್ಕೂಟರ್ ಬುಧವಾರ ಬಿಡುಗಡೆಗೊಂಡಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 
 
ಬೆಲೆ (Price): 
 
ಹೊಚ್ಚ ಹೊಸ 'ಯಮಹಾ ಏರೋಕ್ಸ್ ಇ' ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.2,81,600 (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 
 
ವಿನ್ಯಾಸ, ಬಣ್ಣಗಳು & ಸುತ್ತಳತೆ (Design, Colours & Dimensions):
 
ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಒಳಗೊಂಡಿದೆ. ಅಗ್ರೆಸಿವ್ ಬಾಡಿವರ್ಕ್  ಹೊಂದಿದ್ದು, ಟ್ವಿನ್-ಐ ಎಲ್ಇಡಿ ಹೆಡ್‌ಲೈಟ್‌ಗಳನ್ನು ಪಡೆದಿದೆ. 'ಏರೋಕ್ಸ್ ಇ' ಬ್ರ್ಯಾಂಡಿಂಗ್, ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್‌ಲೈಟ್‌ನ್ನು ಹೊಂದಿದೆ. ಬ್ಲೂಯಿಶ್ ವೈಟ್ ಕಾಕ್‌ಟೈಲ್ (ಗ್ಲಾಸಿ ವೈಟ್) ಎಂಬ ಬಣ್ಣದೊಂದಿಗೂ ಸಿಗುತ್ತದೆ.
 
ಈ ಎಲೆಕ್ಟ್ರಿಕ್ ಸ್ಕೂಟರ್ 1,980 ಮಿಮೀ ಉದ್ದ, 700 ಮಿಮೀ ಅಗಲ ಹಾಗೂ 1,150 ಮಿಮೀ ಎತ್ತರವಿದೆ. 145 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,350 ಮಿಮೀ ವೀಲ್‌ಬೇಸ್‌ನ್ನು ಹೊಂದಿದೆ. 14-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
 
ಕಾರ್ಯಕ್ಷಮತೆ (Performance):
 
ನೂತನ 'ಯಮಹಾ ಏರೋಕ್ಸ್ ಇ' 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ರಿಮೂವಬಲ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 117 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 95.5 ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇಕೋ, ಸ್ಟ್ಯಾಂಡರ್ಡ್ ಮತ್ತು ಪವರ್ ಎಂಬ ಮೂರು ಮೋಡ್‌ಗಳನ್ನು ಒಳಗೊಂಡಿದೆ. 
 
ವೈಶಿಷ್ಟ್ಯಗಳು (Features): 
 
ಇದು ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹಾಗೂ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 
 
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
 
ಈ ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್-ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.