Dhamaal 4: ಬಾಕ್ಸ್ ಆಫೀಸ್‌ನಲ್ಲಿ 'ಧಮಾಲ್ 4' ಅಬ್ಬರ

Dhamaal 4 Box Office Day 3 Collection: ನಟ ಅಜಯ್ ದೇವಗನ್‌ ನಟನೆಯ ಬಾಲಿವುಡ್ ಕಾಮಿಡಿ ಸಿನಿಮಾ 'ಧಮಾಲ್ 4' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

Jul 13, 2026 - 12:41
Dhamaal 4: ಬಾಕ್ಸ್ ಆಫೀಸ್‌ನಲ್ಲಿ 'ಧಮಾಲ್ 4' ಅಬ್ಬರ

ಮುಂಬೈ: ನಟ ಅಜಯ್ ದೇವಗನ್‌ಗೆ ಶುಕ್ರದೆಸೆ ಶುರುವಾಗಿದೆ. ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ಕಾಮಿಡಿ ಸಿನಿಮಾ 'ಧಮಾಲ್ 4' (Dhamaal 4) ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. 

ಈ ಚಿತ್ರವು ಜುಲೈ 10 ಶುಕ್ರವಾರದಂದು ಬಿಡುಗಡೆಯಾಗಿತ್ತು. ಸದ್ಯ ಮೂರನೇ ದಿನದಂದು (ಭಾನುವಾರ) ಸಹ ಉತ್ತಮ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ ರೂ.28.50 ಕೋಟಿ ನೆಟ್ ಗಳಿಕೆಯಾಗಿದೆ. ಚಿತ್ರಮಂದಿರಗಳಲ್ಲಿ ಶೇಕಡ 50% ಆಕ್ಯುಪೆನ್ಸಿ ದಾಖಲಾಗಿದೆ. ಇದರೊಂದಿಗೆ ವಿಶ್ವಾದ್ಯಂತ ರೂ.92 ಕೋಟಿ (ಗ್ರಾಸ್) ಬಾಚಿದ್ದು, ರೂ.100 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ.

'ಧಮಾಲ್ 4'ಗೆ ಇಂದ್ರ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಟಿ-ಸೀರೀಸ್, ದೇವಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್ ಮತ್ತು ಮಾರುತಿ ಇಂಟರ್‌ನ್ಯಾಷನಲ್‌ ಜಂಟಿಯಾಗಿ ನಿರ್ಮಿಸಿವೆ. 

ಈ ಸಿನಿಮಾದಲ್ಲಿ ರೀತೇಶ್ ದೇಶ್‌ಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫ್ರಿ, ಸಂಜಯ್ ಮಿಶ್ರಾ ಹಾಗೂ ರವಿ ಕಿಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.