Nothing Phone 4b: ನಾಳೆಯಿಂದ ಹೊಸ 'ನಥಿಂಗ್ ಫೋನ್ 4ಬಿ' ಸೇಲ್ಸ್ ಶುರು

Tomorrow Nothing Phone 4b Sales Begin: ನಾಳೆಯಿಂದ ಹೊಸ 'ನಥಿಂಗ್ ಫೋನ್ 4ಬಿ' ಸ್ಮಾರ್ಟ್‌ಫೋನ್‌ ಮಾರಾಟವು ಶುರುವಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Jul 13, 2026 - 16:55
Nothing Phone 4b: ನಾಳೆಯಿಂದ ಹೊಸ 'ನಥಿಂಗ್ ಫೋನ್ 4ಬಿ' ಸೇಲ್ಸ್ ಶುರು

ಬೆಂಗಳೂರು: ನೀವು ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ನಾಳೆಯಿಂದ (ಜುಲೈ 14) ನೂತನ ನಥಿಂಗ್ ಫೋನ್ 4ಬಿ (Nothing Phone 4b) ಸ್ಮಾರ್ಟ್‌ಫೋನ್‌ ಮಾರಾಟವು ಶುರುವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗುತ್ತದೆ.

ಇದು 8GB RAM + 128GB ಹಾಗೂ 8GB RAM + 256GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ. ಕ್ರಮವಾಗಿ ರೂ.34,999 ಹಾಗೂ ರೂ.38,999 ಬೆಲೆಯನ್ನು ಹೊಂದಿದೆ. 

ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 33W ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್‌ನ್ನು ಒಳಗೊಂಡಿದೆ. 

ಹೊಸ 'ನಥಿಂಗ್ ಫೋನ್ 4ಬಿ' 50 MP ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, 8 MP ಅಲ್ಟ್ರಾ-ವೈಡ್ ಲೆನ್ಸ್‌ನ್ನು ಪಡೆದಿದೆ. ಸೆಲ್ಫಿಗಾಗಿ 16 MP ಕ್ಯಾಮೆರಾವನ್ನು ಒಳಗೊಂಡಿದೆ. 6.77-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.

ಇದು ಲೈಟ್ ಬ್ಲೂ, ಬ್ಲ್ಯಾಕ್ ಹಾಗೂ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರಿಗೆ ಲಭ್ಯವಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.