FIFA-2026: ಸ್ಪೇನ್ ತಂಡಕ್ಕೆ ಭರ್ಜರಿ ಜಯ.. ಫೈನಲ್‌ಗೆ ಎಂಟ್ರಿ

FIFA-2026: ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸ್ಪೇನ್ ಜಯ ಗಳಿಸಿದೆ.

Jul 15, 2026 - 15:18
Jul 15, 2026 - 19:41
FIFA-2026: ಸ್ಪೇನ್ ತಂಡಕ್ಕೆ ಭರ್ಜರಿ ಜಯ.. ಫೈನಲ್‌ಗೆ ಎಂಟ್ರಿ

ಅಮೆರಿಕ: ಇಲ್ಲಿನ ಟೆಕ್ಸಾಸ್‌ನ ಡಲ್ಲಾಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್ ಜಯ ಗಳಿಸಿದೆ. ಫ್ರಾನ್ಸ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಈ ಪಂದ್ಯವನ್ನು ಗೆದ್ದು ಬೀಗಿದ್ದು, ಫೈನಲ್‌ಗೂ ಲಗ್ಗೆ ಇಟ್ಟಿದೆ.

ಈ ಪಂದ್ಯದ ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದಾಗ್ಯೂ ಸ್ಪೇನ್ ಸಂಪೂರ್ಣವಾದ ಹಿಡಿತ ಸಾಧಿಸಿತು. ಮೊದಲರ್ಧದ 22ನೇ ನಿಮಿಷದಲ್ಲಿ ಮೈಕೆಲ್ ಒಯರ್ಜಾಬಲ್, ಅದ್ಭುತವಾದ ಗೋಲು ಬಾರಿಸಿ, 1-0 ಮುನ್ನಡೆ ತಂದುಕೊಟ್ಟರು. ಆ ಬಳಿಕ ದ್ವಿತೀಯಾರ್ಧದ 58ನೇ ನಿಮಿಷದಲ್ಲಿ ಪೆಡ್ರೊ ಪೊರೊ, ಮತ್ತೊಂದು ಗೋಲು ಗಳಿಸಿ, ಗೆಲುವಿನ ದಡ ಮುಟ್ಟಿಸಿದರು.

ಕೈಲಿಯನ್ ಎಂಬಪ್ಪೆ ಹಾಗೂ ಉಸ್ಮಾನೆ ಡೆಂಬೆಲೆ ಅವರಂತಹ ಸ್ಟಾರ್ ಆಟಗಾರರಿದ್ದರೂ 'ಫ್ರಾನ್ಸ್' ಹೀನಾಯವಾಗಿ ಸೋಲು ಕಂಡಿತು.  

ನಾಳೆ (ಜುಲೈ 16) ಬೆಳ್ಳಗೆ 12:30ಕ್ಕೆ ಎರಡನೇ ಸೆಮಿಫೈನಲ್‌ ಪಂದ್ಯ ಜರುಗಲಿದ್ದು, ಇಂಗ್ಲೆಂಡ್ ಹಾಗೂ ಅರ್ಜೆಂಟಿನಾ ತಂಡಗಳು ಮುಖಾಮುಖಿಯಾಗಲಿವೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.