Realme: ಹೊಸ ರಿಯಲ್‌ಮಿ ನಾರ್ಜೊ 100ಎಕ್ಸ್ 5G ಫೋನ್‌ ಬಿಡುಗಡೆ.. ಬೆಲೆ ಎಷ್ಟು?

Realme Narzo 100x 5G: ಬಹುನಿರೀಕ್ಷಿತ 'ರಿಯಲ್‌ಮಿ ನಾರ್ಜೊ 100ಎಕ್ಸ್ 5ಜಿ' ಸ್ಮಾರ್ಟ್‌ಫೋನ್‌ ಇಂದು (ಬುಧವಾರ) ಬಿಡುಗಡೆಗೊಂಡಿದೆ.

Jul 15, 2026 - 16:27
Jul 15, 2026 - 16:27
Realme: ಹೊಸ ರಿಯಲ್‌ಮಿ ನಾರ್ಜೊ 100ಎಕ್ಸ್ 5G ಫೋನ್‌ ಬಿಡುಗಡೆ.. ಬೆಲೆ ಎಷ್ಟು?

ಬೆಂಗಳೂರು: ಬಹುನಿರೀಕ್ಷಿತ ರಿಯಲ್‌ಮಿ ನಾರ್ಜೊ 100ಎಕ್ಸ್ 5ಜಿ (Realme Narzo 100x 5G) ಸ್ಮಾರ್ಟ್‌ಫೋನ್‌ ಇಂದು (ಬುಧವಾರ) ಬಿಡುಗಡೆಗೊಂಡಿದೆ. 

ಇದು 4GB RAM + 64GB, 6GB + 128GB ಹಾಗೂ 6GB + 256GB ಇಂಟರ್ನಲ್ ಸ್ಟೋರೇಜ್‌ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಕ್ರಮವಾಗಿ ರೂ.20,999, ರೂ.22,999 ಮತ್ತು ರೂ.22,999 ಬೆಲೆಯನ್ನು ಹೊಂದಿದೆ. 

ಈ ಫೋನ್ 8,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಬಲ್ಲದು. ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್‌ನ್ನು ಪಡೆದಿದೆ. 50MP ಮುಖ್ಯ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 6.8-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ತನ್ನದಾಗಿಸಿಕೊಂಡಿದೆ. 

ಜೊತೆಗಿದು ಫ್ಲ್ಯಾಶ್ ಆರೆಂಜ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ಜುಲೈ 22 ರಿಂದ ಅಮೆಜಾನ್ ಹಾಗೂ ರಿಯಲ್‌ಮಿ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವು ಶುರುವಾಗಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.