ಈಶ್ವರಮಂಗಲ: ಜಾಗೃತ ಹಿಂದೂ ಜಾಗರಣ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

Ishwaramangala: Kargil Vijay Diwas: ಈಶ್ವರಮಂಗಲದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ, ಜಾಗೃತ ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಡೆಯಿತು.

Jul 27, 2026 - 12:25
ಈಶ್ವರಮಂಗಲ: ಜಾಗೃತ ಹಿಂದೂ ಜಾಗರಣ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಪುತ್ತೂರು: ಈಶ್ವರಮಂಗಲದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ, ಜಾಗೃತ ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಡೆಯಿತು. 

ಜಾಗೃತ ಜಾಗರಣ ವೇದಿಕೆ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ, ಪೂರ್ಣಾತ್ಮ ರಾವ್ ಪುಲಿತ್ತಡಿ, ಅಬ್ದುಲ್ ಖಾದರ್ ನರಸೀನಡ್ಕ ಹಾಗೂ  ನಾರಾಯಣ ಬಿಡಿ ಗದ್ದೆ ಗೌರವ ನಮನಗಳನ್ನು ಸಲ್ಲಿಸಿದರು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಬಲಿದಾನಗೈದ ವೀರ ಯೋಧರ ಸ್ಮರಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ದೇಶಭಕ್ತರನ್ನು ವಕೀಲ ಚಿನ್ಮಯ್ ಸ್ವಾಗತಿಸಿದರು. 'ವಂದೇ ಮಾತರಂ' ಗೀತೆಯನ್ನು ರಜತ್ ಬಸಿರಡ್ಕ ಹಾಡಿದರು. ಮಂಜುನಾಥ್ ರೈ ಸಾಂತ್ಯ, ಆನಂದ ರೈ ಸಾಂತ್ಯ, ಗೌರೀಶ್ ಚಿಮಿನಿಗುಡ್ಡೆ, ಪ್ರವೀಣ್ ನೀರಳಿಕೆ ರಾಮ್ ಪ್ರಸಾದ್ ಆಳ್ವ ಮೆನಾಲ, ರಾಜೇಂದ್ರ ಪ್ರಸಾದ್ ರೈ, ದೀಪಕ್ ಮುಂಡ್ಯ, ಜಗದೀಶ್ ರಾವ್, ಸತೀಶ್ ಸುರುಳಿಮೂಲೆ, ರಾಮಣ್ಣ ಬಸಿರಡ್ಕ ಪೂರ್ಣಚಂದ್ರ ರೈ ನೆಲ್ಲಿತಡ್ಕ ಮತ್ತು ಜಾಗೃತ ಹಿಂದೂ ಜಾಗರಣ ಈಶ್ವರಮಂಗಲದ ಎಲ್ಲಾ ಪದಾಧಿಕಾರಿಗಳು, ದೇಶಭಕ್ತ ಬಂಧುಗಳು ಭಾಗವಹಿಸಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.