Motorola: ಮೊಟೊರೊಲಾ ಎಡ್ಜ್ 70 ಮ್ಯಾಕ್ಸ್ ಫೋನ್‌ ಮಾರಾಟವು ಶುರು

Motorola Edge 70 Max: ಹೊಸ 'ಮೊಟೊರೊಲಾ ಎಡ್ಜ್ 70 ಮ್ಯಾಕ್ಸ್' ಸ್ಮಾರ್ಟ್‌ಫೋನ್‌ ಮಾರಾಟವು ಸೋಮವಾರದಿಂದ ಶುರುವಾಗಿದೆ.

Jul 21, 2026 - 16:38
Motorola: ಮೊಟೊರೊಲಾ ಎಡ್ಜ್ 70 ಮ್ಯಾಕ್ಸ್ ಫೋನ್‌ ಮಾರಾಟವು ಶುರು

ಹೊಸ ಮೊಟೊರೊಲಾ ಎಡ್ಜ್ 70 ಮ್ಯಾಕ್ಸ್ (Motorola Edge 70 Max) ಸ್ಮಾರ್ಟ್‌ಫೋನ್‌ ಮಾರಾಟವು ಸೋಮವಾರದಿಂದ ಶುರುವಾಗಿದೆ. ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 

ಇದು 8GB RAM + 256GB ಹಾಗೂ 12GB + 256GB ಇಂಟರ್ನಲ್ ಸ್ಟೋರೇಜ್‌ನ್ನು ಪಡೆದಿದೆ. ಕ್ರಮವಾಗಿ ರೂ.54,999 ರಿಂದ ರೂ.59,999 ದರವನ್ನು ಹೊಂದಿದೆ.

ಈ ಫೋನ್‌ 7,100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 90W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್‌ನ್ನು ಪಡೆದಿದೆ. ಆಂಡ್ರಾಯ್ಡ್ 16 (Android 16) ಮತ್ತು ಮೊಟೊಎಐ (motoAI) ಫೀಚರ್‌ಗಳನ್ನು ಹೊಂದಿದೆ. 

ಇದರೊಂದಿಗೆ ನೂತನ ಸ್ಮಾರ್ಟ್‌ಫೋನ್‌, 6.8-ಇಂಚಿನ AMOLED ಡಿಸ್‌ಪ್ಲೇ ಒಳಗೊಂಡಿದ್ದು, ಹೆಚ್ಚು ಬ್ರೈಟ್‌ನೆಸ್ ಆಗಿಯೂ ಇದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆದಿದ್ದು, ಸೆಲ್ಫಿಗಾಗಿ 32MP ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ. 

ಜೊತೆಗಿದು ಪ್ಯಾಂಟೋನ್ ಆಕ್ವಾ ಗ್ರೇ, ಪ್ಯಾಂಟೋನ್ ಡಾರ್ಕ್ ಶ್ಯಾಡೋ ಹಾಗೂ ಪ್ಯಾಂಟೋನ್ ಐಸ್ ಮೆಲ್ಟ್‌ ಬಣ್ಣಗಳೊಂದಿಗೂ ಸಿಗುತ್ತದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.