ಪುತ್ತೂರು: ಸಂತ ಫಿಲೋಮಿನ ಪ್ರೌಢಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ದಿನ ಆಚರಣೆ

St. Philomena High School: ಪುತ್ತೂರಿನ ಸಂತ ಫಿಲೋಮಿನ ಪ್ರೌಢಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ದಿನ ಆಚರಿಸಲಾಗಿತು.

Jul 20, 2026 - 20:48
ಪುತ್ತೂರು: ಸಂತ ಫಿಲೋಮಿನ ಪ್ರೌಢಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ದಿನ ಆಚರಣೆ

ಪುತ್ತೂರು: ಜೀವನವೆಂಬುದು ಅತ್ಯಂತ ಅಮೂಲ್ಯವಾದದ್ದು, ನಾವು ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಿವೆ ಎಂಬುದು ನಮ್ಮ ಕೈಯಲ್ಲಿದೆ ಎಂದು ಮುಖ್ಯ ಶಿಕ್ಷಕ ವಂ.ಮ್ಯಾಕ್ಸಿಮ್ ಡಿಸೋಜಾ ಹೇಳಿದರು.

ನಗರದ ಸಂತ ಫಿಲೋಮಿನ ಅನುದಾನಿತ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವ್ಯಸನ ಮುಕ್ತ  ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವರು ಮಾದಕ ವ್ಯಸನಕ್ಕೆ ತುತ್ತಾಗಿ ಜೀವನವನ್ನು ಕಳೆದುಕೊಂಡಿದ್ದನ್ನು ಕಾಣಬಹುದು. ಆ ಚಟಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು. ಒಳಿತನ್ನು ಪೋಷಿಸಿ ಕೆಡುಕನ್ನು ತ್ಯಜಿಸಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್ ಪತ್ರಾವೋ ಆಸ್ಪತ್ರೆಯ ಡಿ-ಎಡಿಕ್ಷನ್ ಸೆಂಟರ್ ಸಿಬ್ಬಂದಿ  ಝೀಟ ಡಿಸೋಜಾ ಹಾಗೂ ಲವೀನಾ ಡಿಸೋಜಾ ಅವರು ಆಗಮಿಸಿದ್ದರು. ಪ್ರೆಸೆಂಟೇಷನ್  ಸ್ಲೈಡ್‌ಗಳ ಮೂಲಕ ಮಾದಕ ವಸ್ತುಗಳು ಎಂದರೇನು. ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. 

ಶಾಲಾ ಶಿಕ್ಷಕಿ ಕಾರ್ಮಿನ್ ಪಾಯಸ್ ವಂದನಾರ್ಪಣೆ ಮಾಡಿದರು. ಬೆನೆಟ್ ಮೊಂತೇರೋ ಈ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.