Today Gold Price: ಇಂದು ಬಂಗಾರದ ಬೆಲೆ ಭಾರೀ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಆಭರಣದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

Jul 22, 2026 - 11:46
Today Gold Price: ಇಂದು ಬಂಗಾರದ ಬೆಲೆ ಭಾರೀ ಏರಿಕೆ

ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಆಭರಣದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
 
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.2,290 ಹೆಚ್ಚಳವಾಗಿ ರೂ.1,46,510 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.2,100 ಏರಿಕೆಯಾಗಿ ರೂ.1,34,300ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,720 ಹೆಚ್ಚಳವಾಗಿ ರೂ.1,09,880 ಆಗಿದೆ. 
 
ಅದೇ ರೀತಿಯಲ್ಲಿ 10 ಗ್ರಾಂ ಪ್ಲಾಟಿನಂ ಬೆಲೆ ರೂ.1,500 ಏರಿಕೆಯಾಗಿ ರೂ.51,370ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ದರ ರೂ.5,000 ಹೆಚ್ಚಳವಾಗಿ ರೂ.2,40,000 ದರದಲ್ಲಿ ಮಾರಾಟವಾಗುತ್ತಿದೆ. 
 
ಷೇರುಪೇಟೆ ವಹಿವಾಟು ಕುಸಿತ:
 
ಭಾರತದ ಷೇರುಪೇಟೆ ಆರಂಭಿಕ ವಹಿವಾಟು ಇಂದು ನಕಾರತ್ಮಕವಾಗಿದೆ. ಬೆಳಗ್ಗೆ 9:35ರ ಸುಮಾರಿಗೆ ಸೆನ್ಸೆಕ್ಸ್ 564.77 ಅಂಕಗಳು ಅಥವಾ  ಶೇಕಡ 0.73% ಇಳಿಕೆಯಾಗಿ 76,905.34 ಅಂಕಗಳಿಗೆ ತಲುಪಿದೆ. ನಿಫ್ಟಿ 162.25 ಅಂಕಗಳು ಶೇಕಡ 0.67% ಕುಸಿತವಾಗಿ 24,025.45 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. 
 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಮದಾಗುವ ಜೆನೆರಿಕ್ ಔಷಧಿಗಳ ಮೇಲೆ ಹಂತ-ಹಂತವಾಗಿ ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಫಾರ್ಮ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿವೆ. ಗ್ಲಾಂಡ್ ಫಾರ್ಮಾ 3.57%, ಪಿಪಿಎಲ್ ಫಾರ್ಮಾ 3.28%, ಅಲ್ಕೆಮ್ ಲ್ಯಾಬೊರೇಟರೀಸ್ 2.97%, ಲುಪಿನ್ 2.92%, ಅಜಂತಾ ಫಾರ್ಮಾ 2.88% ಹಾಗೂ ಅರಬಿಂದೋ ಫಾರ್ಮಾ 2.79% ಷೇರು ಕುಸಿತವಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.