ದಿನ ಭವಿಷ್ಯ 

24-10-2025

Oct 24, 2025 - 16:07
ದಿನ ಭವಿಷ್ಯ 


                   ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 6


೧. ಮೇಷ:
 ಅನಿಶ್ಚಿತ ವಾತಾವರಣ ಕ್ರಿಯಾಶೀಲತೆಗೆ ಅಡ್ಡಿಯಾಗದು‌.  ಉದ್ಯೋಗಸ್ಥರಿಗೆ ಒಂದು ಬಗೆಯ ಜಾಡ್ಯ . ಉದ್ಯಮದ  ಉತ್ಪನ್ನಗಳ ಮಾರಾಟ ವ್ಯವಸ್ಥೆ ವಿಸ್ತರಣೆ. ಸಕಾಲದಲ್ಲಿ‌  ಅಪೇಕ್ಷಿತ ನೆರವು ಲಭ್ಯ.  ಊರಿನ ದೇವಾಲಯಕ್ಕೆ ಭೇಟಿ.ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

 

೨.ವೃಷಭ:


  ನಿರುತ್ಸಾಹದ ಮನೋಭಾವ. ಒಂದೇ ಉದ್ಯಮದ ಮೇಲೆ ಗಮನ ಹರಿಸಿದರೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ವೃದ್ಧಿ, ನೆಮ್ಮದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.


೩ಮಿಥುನ:

  ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು.  ಗೃಹೋದ್ಯಮದ ಉತ್ಪನ್ನಗಳಿಗೆ ಗ್ರಾಹಕರ ಸಂಖ್ಯೆ ವೃದ್ಧಿ. ಹೊಸಹೊಸ ವಿದ್ಯೆಗಳನ್ನು ಕಲಿಯುವ ಉತ್ಸಾಹ. ಕೃಷಿ ಆಧಾರಿತ ಉದ್ಯಮಗಳಿಗೆ ಶುಭಕಾಲ. ಹಿರಿಯರು, ಗೃಹಿಣಿಯರಿಗೆ ಧನ್ಯತೆಯ ಭಾವ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ.

೪. ಕರ್ಕಾಟಕ:

  ಸಹೋದ್ಯೋಗಿಗಳೊಂದಿಗೆ ಸೌಹಾರ್ದಪೂರ್ಣ ನಡವಳಿಕೆ. ಅಭಿವೃದ್ಧಿಯ ಹೊಸ ಕಲ್ಪನೆಗಳು ಸಾಕಾರ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ದ್ವಿಚಕ್ರ ವಾಹನ ಸಂಚಾರಿಗಳು ಎಚ್ಚರ. ಹಿರಿಯರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೫.ಸಿಂಹ:

 ಹೆಚ್ಚು ಕಡಿಮೆ ಮಿಶ್ರಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸರಕಾರಿ ಅಧಿಕಾರಿಗಳಿಗೆ ಕರ್ತವ್ಯದ ಹೊರೆ.  ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ.
ಸದ್ಭಾವನೆಯ ವರ್ತನೆಯಿಂದ ಕಾರ್ಯಸಿದ್ಧಿ.  ವ್ಯವಹಾರದ ನಿಮಿತ್ತ ಪ್ರಯಾಣ ಮುಂದಕ್ಕೆ. ಸಂಕಷ್ಟನಾಶನ ಗಣೇಶ ಸ್ರೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೋಡಾಪರಿಹಾರ ಸ್ತೋತ್ರ ಓದಿ.


೬.ಕನ್ಯಾ:

 ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಹಕಾರ. ಸಾರ್ವಜನಿಕ ಸಂಪರ್ಕದಲ್ಲಿ ಅಪಾರ ಯಶಸ್ಸು. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆಗಿಂತ ಅಧಿಕ ಲಾಭ. ಸುಶಿಕ್ಷಿತ
ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಮಹಿಷಮರ್ದಿನಿ ಸ್ತೋತ್ರ ಓದಿ.


೭. ತುಲಾ:

 ಪೂರ್ಣ ದೈವಾನುಗ್ರಹದ ದಿನ. ಗೋಪೂಜೆ, ಲಕ್ಷ್ಮೀಪೂಜೆಗಳಲ್ಲಿ ಭಾಗಿ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಮಧ್ಯಮ ಲಾಭ.
ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೮.ವೃಶ್ಚಿಕ:

 ಸತ್ಕರ್ಮಗಳು ಫಲ ನೀಡುವ ದಿನ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯಮದ ನೌಕರರ ಪೂರ್ಣ ಸಹಕಾರ. ಮನೆಯಲ್ಲಿ ಸಮಾಧಾನದ ವಾತಾವರಣ. ಗೋಶಾಲೆ, ದೇವಾಲಯಗಳಿಗೆ ಭೇಟಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೯.ಧನು:

 ಶುಭಶುಕ್ರವಾರ ಅಕಸ್ಮಾತ್ ಧನಾಗಮ. ದೊಡ್ಡ ಗಾತ್ರ ತಳೆದ ಸಣ್ಣ ಉಳಿತಾಯ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ  ಸ್ಪಂದನ. ಕೃಷ್ಯುತ್ಪಾದನೆ‌ ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಗಣೇಶ ಅಷ್ಟಕ, ವೇದಸಾರ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೦.ಮಕರ:

ಅನಿರೀಕ್ಷಿತ ಧನಲಾಭ. ಬಂಧುವರ್ಗದ ಸಂಭ್ರಮದಲ್ಲಿ ಭಾಗಿ. ಮನೆಯಲ್ಲಿ‌ ಅತಿಥಿ ಸತ್ಕಾರ ಯೋಗ. ಮಹಿಳೆಯರ ಸ್ವೋದ್ಯೋಗ ಯೋಜನೆಗೆ ಮುನ್ನಡೆ. ದೇವಾಲಯದಲ್ಲಿ ವಿಶೇಷ ಪೂಜೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

 
೧೧. ಕುಂಭ:

ಸಂತೃಪ್ತ ಮನೋಭಾವದಲ್ಲಿ ದಿನಾರಂಭ ಉದ್ಯಮದಲ್ಲಿ ಪ್ರಚಂಡ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ಮುದ್ರಣ ಸಾಮಗ್ರಿ, ಸ್ಟೇಶನರಿ, ವಸ್ತ್ರ, ಆಭರಣ ಇತ್ಯಾದಿಗಳಿಗೆ ಅಧಿಕ‌ ಬೇಡಿಕೆ. ಅಕಸ್ಮಾತ್ ಆಗಮಿಸಿದ ಬಂಧುವರ್ಗದ ಸತ್ಕಾರ. ಗಣೇಶ ಕವಚ, ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ.


೧೨. ಮೀನ:

 ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ. ಸೇವಾ‌ ಮಾದರಿಯ ಉದ್ಯೋಗಸ್ಥರಿಗೆ  ಅಧಿಕ ಯಶಸ್ಸು. ಸಮಾಜದಲ್ಲಿ ಗೌರವ ವೃದ್ಧಿ . ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.