ಅಸ್ತಿತ್ವಕ್ಕಾಗಿ ಬೇರೆ ಪಕ್ಷಗಳ ಅವಲಂಬಿಸಿರುವ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ

ಯಾವ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆಯೋ ಅಂತಹ ಪಕ್ಷದಿಂದ ದೇಶದ ರಕ್ಷಣೆ ಹೇಗೆ ಸಾಧ್ಯ. ಲಾಭವಾಗಲಿ ನಷ್ಟವಾಗಲಿ ರಾಷ್ಟ್ರವಾದಿ ಚಿಂತನೆ ಮಾಡುವುದು ಬಿಜೆಪಿ.

May 11, 2026 - 20:29
ಅಸ್ತಿತ್ವಕ್ಕಾಗಿ ಬೇರೆ ಪಕ್ಷಗಳ ಅವಲಂಬಿಸಿರುವ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್ ಪಕ್ಷ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಅಸ್ತಿತ್ವಕ್ಕಾಗಿ ಇನ್ನೊಂದು ಪಕ್ಷ ಅವಲಂಬಿತವಾಗಿಯೇ ತಮ್ಮ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನ ಕಾರಡಗಿಯ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಪಂಡಿತ ದಿನ್ ದಯಾಳ ಉಪಾಧ್ಯಾಯ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಜಮ್ಮು ಕಾಶ್ಮೀರದ ವಿಚಾರದಲ್ಲಿ ಒಂದು ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ಕಾನೂನು ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಚುನಾವಣೆಗಾಗಿ ಒಂದು ಪಕ್ಷ ಕಟ್ಟಬಾರದು. ಒಂದು ದೇಶ ಕಟ್ಟುವ ರಾಷ್ಟ್ರೀಯವಾದಿ ಪಕ್ಷವಾಗಿರಬೇಕು ಎಂದು ಜನಸಂಘವನ್ನು ಕಟ್ಟಿದರು. ಇವತ್ತಿನ ರಾಜಕಾರಣ ನೋಡಿದಾಗ ಅಧಿಕಾರಕ್ಕಾಗಿ ರಾಜಕಾರಣ ಮಾಡುವುದು ಇನ್ನೊಂದು ಜನರಿಗಾಗಿ ಪಿಪಲ್ ಪೊಲಿಟಿಕ್ಸ್ ಮಾಡುವುದು. ಭಾರತೀಯ ಜನತಾಪಕ್ಷ ಪೀಪಲ್ಸ್ ಪೊಲಿಟಿಕ್ಸ್ ಮಾಡುತ್ತಿದೆ. ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಇನ್ನೊಂದು ಪಕ್ಷ ಅವಲಂಬಿತವಾಗಿಯೇ ತಮ್ಮ ರಾಜಕೀಯ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಯಾವ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆಯೋ ಅಂತಹ ಪಕ್ಷದಿಂದ ದೇಶದ ರಕ್ಷಣೆ ಹೇಗೆ ಸಾಧ್ಯ. ಲಾಭವಾಗಲಿ ನಷ್ಟವಾಗಲಿ ರಾಷ್ಟ್ರವಾದಿ ಚಿಂತನೆ ಮಾಡುವುದು ಬಿಜೆಪಿ. ತಮಿಳುನಾಡಿನಲ್ಲಿ ಆಗಿರುವ ಬೆಳವಣಿಗೆ ಗಮನಿಸಿದ್ದೀರಿ. ಅಲ್ಲಿ ಡಿಎಂಕೆ ಆಡಳಿತ ಇತ್ತು. ಅಲ್ಲಿ ಹೊಸ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಯಾವುದೇ ಸರ್ಕಾರ ಇರಲಿ ಪುನರ್ ಸ್ಥಾಪನೆ ಆಗುವುದು ಭಾರತೀಯ ಜನತಾ ಪಕ್ಷ ಒಂದು ವಿಚಾರಧಾರೆ ಹಾಗೂ ಒಂದು ಉದ್ದೇಶ, ಭಾರತ ದೇಶ ಮತ್ತು ಭಾರತದ ಭವಿಷ್ಯಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ಕರ್ನಾಟಕದಲ್ಲಿ ನಾವು ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಭಾಯಿಸಬೇಕು. ಜನರು ಯಾವುದೇ ಕೆಲಸಕ್ಕೂ ದುಡ್ಡು ಕೊಡದೇ ಈ ಸರ್ಕಾರದಲ್ಲಿ ಏನೂ ಆಗುವುದಿಲ್ಲ, ಸಚಿವರಿಗೆ ದುಡ್ಡು ಕೊಟ್ಟರೆ ಕೆಲಸ, ಇಲ್ಲಿ ಒಂದು ಸಣ್ಣ ಕೆಲಸ ಆಗಬೇಕೆಂದರೂ ಬೆಂಗಳೂರಿನಿಂದ ಫೋನ್ ಬರಬೇಕು, ಅಲ್ಲಿ ಹಣ ಮುಟ್ಟಿದಾಗ ಮಾತ್ರ ಅಲ್ಲಿಂದ ಫೋನ್ ಬರುತ್ತದೆ ಎಂದು ಹೇಳಿದರು.

ಹೊಸ ರೀತಿಯ ಭ್ರಷ್ಟಾಚಾರ: 

ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ರೀತಿಯ ಭ್ರಷ್ಟಾಚಾರ ರಾಜ್ಯದಲ್ಲಿ ಹೆಚ್ಚಾಗಿದೆ. ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಎಸ್ತಿ ಎಸ್ಪಿ ಸಮುದಾಯದ ಗಂಗಾ ಕಲ್ಯಾಣ ಯೋಜನೆ ಅಡಿ ಯಾವುದೇ ಬೋ‌ರ್ ವೆಲ್ ಕೊರೆಯಲಿಲ್ಲ. ಹಿಂದುಳಿದ ವರ್ಗಗಳ ನಿಗಮಗಳಿಗೆ ಮೀಸಲಿಟ್ಟಿದ್ದ 440 ಕೋಟಿ ರೂ. ಗಳನ್ನು ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಲು ಖರ್ಚು ಮಾಡಿದ್ದಾರೆ. ಎಸ್ಸಿಪಿ ಟಿಎಸ್ ಪಿಗೆ ಮೀಸಲಿಟ್ಟಿದ್ದರಲ್ಲಿ 1,400 ಕೋಟಿ ರೂ. ಕಡತ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಇಲ್ಲ. ನಾವು ಜನಪರವಾಗಿ ಹೋರಾಟ ಮಾಡಿ ರಾಜಕೀಯ ಜವಾಬ್ದಾರಿ ನಿರ್ವಹಿಸಬೇಕು. ರಾಷ್ಟ್ರೀಯ ಪಕ್ಷವಾಗಿ ಅಂತ್ಯೋದಯ ಅಭಿವೃದ್ದಿ, ದೇಶದ ಐಕ್ಯತೆಯ ವಿಚಾರದಲ್ಲಿ ಎಲ್ಲರೂ ಜನರ ಧ್ವನಿಯಾಗುವ ಸೈನಿಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಧಾರವಾಡ ವಿಭಾಗದ ಪ್ರಶಿಕ್ಷಣ ವರ್ಗದ ಸಂಚಾಲಕರಾದ ಶ್ರೀಪತಿ ಉಡುಪಿ, ಜಿಲ್ಲಾ ಸಂಯೋಜಕರಾದ ಕಲ್ಯಾಣಕುಮಾರ ಶೆಟ್ಟರ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಶಿಗ್ಗಾಂವ ಮಂಡಳದ ಅಧ್ಯಕ್ಷರಾದ ಈಶ್ವರ ಹರವಿ, ಸವಣೂರ ಮಂಡಳದ ಅಧ್ಯಕ್ಷರಾದ ಶಿವಪುತ್ರಪ್ಪ ಕಲಕೋಟಿ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದು ಚಿಕ್ಕಬಿದರಿ, ನೀಲಪ್ಪ ಚವಡಿ, ಮುಖಂಡರುಗಳಾದ ಗಂಗಣ್ಣ ಸಾತಣ್ಣವರ, ದೇವಣ್ಣ ಚಾಕಲಬ್ಬಿ, ಮಹಾಂತೇಶ ಬಿಜ್ಜೂರ, ಸುಭಾಷ ಗಡೆಪ್ಪನವರ, ಡಿ.ಎಸ್ ಮಾಳಗಿ, ತಿಪ್ಪಣ್ಣ ಸಾತಣ್ಣವರ, ಬಸವರಾಜ ಬಿಜಾಪೂರ, ರೇಣಕನಗೌಡ ಪಾಟೀಲ, ಶ್ರೀಮತಿ ಶೋಭಾ ನಿಸ್ಸಿಮಗೌಡ್ರ, ಶ್ರೀಮತಿ ಯಶೋಧಾ ಪಾಟೀಲ, ಶ್ರೀಮತಿ ಇಂದಿರಾ ಪುಟ್ಟನಗೌಡ್ರ ಇತರರು ಇದ್ದರು.