ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ

Apr 7, 2026 - 14:06
ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ

 "ಅಭಿಮಾನ" ಎಂಬ ಪ್ರೀತಿಯ ಹರಕೆ ಹಲವರಿಗೆ ಆಶೀರ್ವಾದ ರೀತಿಯಲ್ಲಿ ಯಾವ ರೀತಿಯ ಕೆಲಸ ಮಾಡುತ್ತದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿರುವುದು ಸೇಡಂನ ಅಭಿಮಾನಿಯ ಹರಕೆ. ಈ ಅಭಿಮಾನಿಯ ಪ್ರೀತಿಯ ಕಥೆ ಹೀಗಿದೆ.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಅಭಿಮಾನಿ ಪ್ರಶಾಂತ್ ಉಪ್ಪಿನ್ ಹರಕೆ ಹೊತ್ತಿದ್ದರು. ಶರಣಪ್ರಕಾಶ್‌ ಪಾಟೀಲ್‌ ಗೆಲುವು ಸಾಧಿಸಿದರೆ 15 ಕಿ.ಮೀ. ದೀರ್ಘ ದಂಡ ನಮಸ್ಕಾರ ಪೂರೈಸುವುದಾಗಿ ಹರಕೆ ಹೊತ್ತಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಈಗ ಹರಕೆ ಪೂರೈಸಿದ್ದಾರೆ. ಸೇಡಂ ತಾಲೂಕಿನ ರುದ್ನೂರು ಗ್ರಾಮದ ಕಾಂಗ್ರೆಸ್ ಪಕ್ಷದ ಪ್ರಕಾಶ್ ಉಪ್ಪಿನ ರುದ್ನೂರು ಗ್ರಾಮದಿಂದ ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದವರೆಗೆ 15 ಕಿ.ಮೀ ದೀರ್ಘ ದಂಡ ನಮಸ್ಕಾರ ಮಾಡುವ ಮೂಲಕ ಹರಕೆ ಪೂರೈಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.