ದಕ್ಷಿಣ ಕನ್ನಡ: ಪಂಜದಲ್ಲಿ ಮೊದಲ ಬಾರಿಗೆ 'ಆಟಿ ನೆಂಪು' ಆಯೋಜನೆ
Dakshina Kannada: ದಕ್ಷಿಣ ಕನ್ನಡದ ಪಂಜದಲ್ಲಿ ಇದೇ ಮೊದಲ ಬಾರಿಗೆ ಆಟಿ ನೆಂಪು-2026 ಹಾಗೂ ಬೃಹತ್ ಸ್ವದೇಶಿ ಖಾದ್ಯ ಮೇಳವನ್ನು ಆಯೋಜಿಸಲಾಗಿದೆ.
ದಕ್ಷಿಣ ಕನ್ನಡ: ಇಲ್ಲಿನ ಪಂಜದಲ್ಲಿ ಇದೇ ಮೊದಲ ಬಾರಿಗೆ ಆಟಿ ನೆಂಪು-2026 ಹಾಗೂ ಬೃಹತ್ ಸ್ವದೇಶಿ ಖಾದ್ಯ ಮೇಳವನ್ನು ಆಯೋಜಿಸಲಾಗಿದೆ. ಕರ್ನಾಟಕ ಸರ್ಕಾರ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೆಸಿಐ ಪಂಜ ಪಂಚಶ್ರೀ & ಲಯನ್ಸ್ ಕ್ಲಬ್ ಸಹಯೋಗದಲ್ಲಿ ಟೀಮ್ ಉಬಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 9 ಭಾನುವಾರದಂದು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 'ಆಟಿ ನೆಂಪು' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆದಾಗ್ಯೂ ಸ್ವದೇಶಿ ಖಾದ್ಯ ಮೇಳವು ಇದೇ ಸಭಾಭವನದಲ್ಲಿ ಆಗಸ್ಟ್ 7, 8 ಹಾಗೂ 9 ರಂದು ಮೂರು ದಿನಗಳ ಕಾಲ ಜರುಗಲಿದೆ.
ಆಟಿ ತಿಂಗಳು ತುಳುವರಿಗೆ ಬರೀ ತಿಂಗಳಲ್ಲ. ಅದು ಒಂದು ಸಂಸ್ಕೃತಿ, ಆರೋಗ್ಯದ ತಿಂಗಳು. ಹಳ್ಳಿಗಳಲ್ಲಿ ಬೆಳೆದ ಸೊಪ್ಪು, ಗೆಣಸು, ಹಲಸು ಹಾಗೂ ಮಾವು ಆಧಾರಿತ ತಿಂಡಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೇಳದ ಪ್ರಮುಖ ಆಕರ್ಷಣೆಗಳೇನು:
ಈ ಮೇಳದಲ್ಲಿ ವಿವಿಧ ಜಿಲ್ಲೆಗಳ ತಿಂಡಿ-ತಿನಿಸುಗಳು, ಸ್ವದೇಶಿ ಮಸಾಲೆ ಪದಾರ್ಥಗಳು, ಕೈಮಗ್ಗದ ಸೀರೆಗಳು, ಕರಕುಶಲ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇನ್ನು ಅನೇಕ ವಿಶೇಷ ಸ್ಟಾಲ್‌ಗಳಿರಲಿವೆ.
ಕುಟುಂಬ ಸಮೇತರಾಗಿ ಆಗಮಿಸಿ, ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಮತ್ತು ಸ್ಥಳೀಯ ಉದ್ಯಮಿಗಳ ಕೈ ಹಿಡಿಯುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9611207577, 9343208599.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.