ಕ್ಯಾಬಿನೆಟ್ ವಿಸ್ತರಣೆಗೆ ಕೂಡಿ ಬಂತು ಕಾಲ.. ಇವತ್ತು ರಾತ್ರಿ 8ಕ್ಕೆ ಮಹತ್ವದ ಸಭೆ

Karnataka Cabinet Expansion: ಕ್ಯಾಬಿನೆಟ್ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ನವದೆಹಲಿಯಲ್ಲಿಂದು ರಾತ್ರಿ 8ಕ್ಕೆ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗೆ ಮಹತ್ವದ ಸಭೆ ನಡೆಯಲಿದೆ.

Jul 28, 2026 - 10:06
Jul 28, 2026 - 10:35
ಕ್ಯಾಬಿನೆಟ್ ವಿಸ್ತರಣೆಗೆ ಕೂಡಿ ಬಂತು ಕಾಲ.. ಇವತ್ತು ರಾತ್ರಿ 8ಕ್ಕೆ ಮಹತ್ವದ ಸಭೆ

ಬೆಂಗಳೂರು: ಕ್ಯಾಬಿನೆಟ್ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ನವದೆಹಲಿಯಲ್ಲಿಂದು ರಾತ್ರಿ 8ಕ್ಕೆ ರಾಹುಲ್ ಗಾಂಧಿ (Rahul Gandhi), ರಾಜ್ಯ ನಾಯಕರೊಂದಿಗೆ ಮಹತ್ವದ ಸಭೆ ನಡೆಯಲಿದೆ.

ಡಿ.ಕೆ.ಶಿವಕುಮಾರ್ (D.K.Shivakumar) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, 2ನೇ ಹಂತದಲ್ಲಿ ಅವರ ಸಂಪುಟ ಸೇರಲು ಅನೇಕ ನಾಯಕರು ಲಾಬಿ ನಡೆಸುತ್ತಿದ್ದರು. ಆದರೆ, ಈವರೆಗೆ ಕ್ಯಾಬಿನೆಟ್ ವಿಸ್ತರಣೆಗೊಂಡಿಲ್ಲ.

ಇಂದು ಜರುಗುವ ನಿರ್ಣಾಯಕ ಸಭೆಯಲ್ಲಿ ಮುಖ್ಯಮಂತ್ರಿ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರೊಂದಿಗೆ ರಾಹುಲ್ ಗಾಂಧಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಿದ್ದಾರೆ. 

ಜಾತಿವಾರು ಮತ್ತು ಪಾಂತ್ಯವಾರು ಪ್ರಾತಿನಿಧ್ಯ ಪರಿಶೀಲಿಸಿ, ಹೊಸ ಸಚಿವರ ಪಟ್ಟಿಯೂ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಬುಧವಾರ ಅಥವಾ ಗುರುವಾರ ನೂತನ ಸಚಿವರ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟು 20 ಸ್ಥಾನಗಳಲ್ಲಿ 18 ಸ್ಥಾನಗಳನ್ನು ತುಂಬಲು ತೀರ್ಮಾನ ಮಾಡಲಾಗಿದೆಯಂತೆ. 2 ಸ್ಥಾನಗಳನ್ನು ಹಾಗೆಯೇ ಖಾಲಿ ಉಳಿಸಿಕೊಳ್ಳಬಹುದು. ಅದನ್ನು ಅಸಮಾಧಾನಿತ ಶಾಸಕರಿಗೆ ಹಂಚುವ ಎಲ್ಲ ಸಾಧ್ಯತೆಗಳಿವೆ.

ಗುರು ಪೂರ್ಣಿಮೆ ಹಿನ್ನೆಲೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ವರಿಷ್ಠರು ಕೂಡ ಸಚಿವರ ಅಂತಿಮ ಪಟ್ಟಿಗೆ ಮುದ್ರೆ ಹಾಕಿದರೆ, ಒಂದೆರಡು ದಿನದಲ್ಲಿ 'ಪ್ರಮಾಣ ವಚನ' ಸಮಾರಂಭ ನಡೆಸಲು ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.

ಅದಕ್ಕೆ ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಅವರು ವಾಪಾಸ್ ಬರುವುದಕ್ಕಾಗಿ 'ವಿಮಾನ ವ್ಯವಸ್ಥೆ' ಕಲ್ಪಿಸಲು ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.