ಪುತ್ತೂರು:ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ ಆಯ್ಕೆ
Puttur Vivekananda Vidyavardhaka Sangha: ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಆಯ್ಕೆಯಾಗಿದ್ದಾರೆ.
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ (Vivekananda Vidyavardhaka Sangha) ಹಾಲಿ ಆಡಳಿತ ಮಂಡಳಿಯ ಅವಧಿ ಜುಲೈ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿಗೆ ಹೊಸಬರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅದರಂತೆ, ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಆಯ್ಕೆಯಾಗಿದ್ದಾರೆ.

ಬಹುದೊಡ್ಡ ಶಿಕ್ಷಣ ಸಂಸ್ಥೆಗಳ ಸಹಯೋಗ ಹೊಂದಿರುವ 'ವಿವೇಕಾನಂದ ವಿದ್ಯಾವರ್ಧಕ ಸಂಘ'ದ ಅಧ್ಯಕ್ಷರಾಗಿ ಹೆಚ್ಚಿನ ಜವಾಬ್ದಾರಿ ನಿರ್ವಹಿಸಲಿರುವ ಕೃಷ್ಣ ಶೆಟ್ಟಿ ಕಡಬ ಅವರ ಆಯ್ಕೆಯನ್ನು ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಸ್ವಾಗತಿಸಲಾಗಿದ್ದು, ಅವರಿಗೆ ವಿಶೇಷ ಗೌರವ ಕೊಟ್ಟು ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷ ಪುಲಸ್ತ್ಯಾ ರೈ ಅವರು, ಅಭಿನಂದನೆ ಮಾತುಗಳನ್ನಾಡಿದ್ದಾರೆ. ಈ ಗೌರವನ್ನು ಸ್ವೀಕರಿಸಿ ಮಾತನಾಡಿದ ಕೃಷ್ಣ ಶೆಟ್ಟಿ ಅವರು, ಹಲವಾರು ಮಂದಿ ಹಿರಿಯ ಶ್ರಮದ ಫಲವಾಗಿ ಬೆಳೆದು ನಿಂತಿರುವ ಪ್ರತಿಷ್ಠಿತ ಸಂಸ್ಥೆಯ ಜವಾಬ್ದಾರಿಯನ್ನು ಎಲ್ಲರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ನಿರ್ವಹಿಸಲಾಗುವುದು. ಜತೆಗೆ ಹಿರಿಯರ ನಿರೀಕ್ಷೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಬಹಳ ವ್ಯವಸ್ಥಿತವಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವಬುದಾಗಿ ಅವರು ಹೇಳಿದ್ದಾರೆ.

ಶ್ರೀಕೃಷ್ಣ ಎಂ.ಆರ್, ಪ್ರಕಾಶ್ ಎನ್.ಕೆ, ರಾಧಾಕೃಷ್ಣ ಗೌಡ ಕೋಲ್ಪೆ, ಶಿವರಾಮ ಶೆಟ್ಟಿ ಕೇಪು, ಸವಿತಾ ಶಿವಸುಬ್ರಹ್ಮಣ್ಯ ಭಟ್, ವಿಶ್ವನಾಥ ರೈ ಪೆರ್ಲ, ಅಶೋಕ್ ಕುಮಾರ್ ಪಿ, ಸುರೇಶ್ ಗೌಡ ಕಲ್ಲೆಂಬಿ, ಮಾಧವ ಕೋಲ್ಪೆ, ಸೀತಾರಾಮ ಗೌಡ ಎ., ವಿಶ್ವನಾಥ ರೈ ಪೆರಿಯಡ್ಕ, ಮೋಹನ ಗೌಡ ಕೆರೆಕ್ಕೋಡಿ, ಅಜಿತ್ ರೈ ಅರ್ತಿಲ, ಪ್ರಮೀಳಾ ಲೋಕೇಶ್, ವಸಂತ ಕರಂಬೋಡಿ, ಶೈಲಶ್ರೀ ರೈ, ಶ್ರೀಕರ ರೈ, ಮೋನಪ್ಪ ಗೌಡ, ಸುಕೇಶ್, ಪ್ರಮೋದ್ ರೈ ನಂದುಗುರಿ, ರಾಜ್‌ಕುಮಾರ್ ಶೆಟ್ಟಿ ನಂದುಗುರಿ, ರವೀಂದ್ರ ಶೆಟ್ಟಿ ಕೇಪು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕೃಷ್ಣ ಶೆಟ್ಟಿ ಅವರ ಆಯ್ಕೆಯನ್ನು ಶ್ಲಾಘಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.