Puttur: ಈಶ್ವರಮಂಗಲದಲ್ಲಿ ಸೆ.5ಕ್ಕೆ ಮೊಸರು ಕುಡಿಕೆ ಉತ್ಸವ.. ಬೃಹತ್ ಕಬಾತ್ ಸ್ಪರ್ಧೆ
Puttur: ಈಶ್ವರಮಂಗಲದ ಪಂಚಲಿಂಗೇಶ್ವರ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 'ಜಾಗೃತ ಹಿಂದೂ ಜಾಗರಣ' ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪುತ್ತೂರು (ಈಶ್ವರಮಂಗಲ): ಇಲ್ಲಿನ ಪಂಚಲಿಂಗೇಶ್ವರ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 'ಜಾಗೃತ ಹಿಂದೂ ಜಾಗರಣ' ವತಿಯಿಂದ, ಸೆ.05 ಶನಿವಾರದಂದು 11ನೇ ವರ್ಷದ ಈಶ್ವರಮಂಗಲ ಮೊಸರು ಕುಡಿಕೆ ಉತ್ಸವ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿದೆ.
ಧಾರ್ಮಿಕ & ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:
ಬೆಳಗ್ಗೆ 9 ಗಂಟೆಗೆ ಸತ್ಯನಾರಾಯಣ ಪೂಜೆ ಆರಂಭವಾಗಲಿದ್ದು, ಮಧ್ಯಾಹ್ನ 12:30ಕ್ಕೆ ಮಹಾ ಮಂಗಳಾರತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದೇ ಮಧ್ಯಾಹ್ನ 2 ಗಂಟೆಗೆ ಮೇಲಿನ ಪೇಟೆಯಿಂದ ಈಶ್ವರಮಂಗಲ ಪೇಟೆಯವರೆಗೆ ಕೃಷ್ಣ ವೇಷಧಾರಿ ಪುಟಾಣಿಗಳ ಬೃಹತ್ ಮೆರವಣಿಗೆ ಜರುಗಲಿದ್ದು, ಅಟ್ಟಿಮಡಿಕೆ ಹೊಡೆಯುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ವಿಶೇಷ ಆಕರ್ಷಣೆಗಳು ಮತ್ತು ಸ್ಪರ್ಧೆಗಳು:
* ಬೃಹತ್ ಕಬಾತ್ ಸ್ಪರ್ಧೆ: ಪಂಚಲಿಂಗೇಶ್ವರ ದೇಗುಲದ ಕಬಾತ್ ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ.10,026 ಹಾಗೂ 'ಶಿವಾಜಿ ಟ್ರೋಫಿ' ನೀಡಲಾಗುತ್ತದೆ.
* ಅಟ್ಟಿ ಮಡಿಕೆ: ಮಡಿಕೆ ಹೊಡೆದ ತಂಡಗಳಿಗೆ, ವಿಶೇಷ ಆಕರ್ಷಕ ಬಹುಮಾನಗಳನ್ನು ಕೊಡಲಾಗುತ್ತದೆ.
* ನೃತ್ಯ ವೈಭವ: ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದ ಬಳಿ, ಪಂಚೋಡಿ ದೇಲಂಪಾಡಿಯ 'ಶ್ರೀರಾಮ ಲಹರಿ ನಾಟ್ಯಾಲಯ' ಮತ್ತು ಈಶ್ವರಮಂಗಲದ 'ವರ್ಣಂ ನೃತ್ಯ ತಂಡ'ದಿಂದ 'ಶ್ರೀಕೃಷ್ಣ ನೃತ್ಯ ವೈಭವ' ಪ್ರದರ್ಶನಗೊಳ್ಳಲಿದೆ.
ಸಭಾ ಕಾರ್ಯಕ್ರಮ ಹಾಗೂ ಉದ್ಘಾಟನೆ:
ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರತನ್ ಕುಮಾರ್ ರೈ ಕರ್ನೂರು ಗುತ್ತು ಶೋಭಾಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಆಯೋಜಕರು ಕೋರಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.