Peru Earthquakes: ಪೆರು ರಾಜಧಾನಿಯಲ್ಲಿ ಪ್ರಬಲ ಎರಡು ಭೂಕಂಪ: 5 ಸಾವು

Peru Earthquakes: ಪೆರು ರಾಜಧಾನಿ ಲಿಮಾದ ಪೂರ್ವದಲ್ಲಿರುವ ಜುನಿನ್ ಪ್ರದೇಶದಲ್ಲಿ ಶನಿವಾರ ರಾತ್ರಿ ಎರಡು ಪ್ರಬಲ ಭೂಕಂಪ ಸಂಭವಿಸಿದೆ.

Jul 20, 2026 - 13:20
Peru Earthquakes: ಪೆರು ರಾಜಧಾನಿಯಲ್ಲಿ ಪ್ರಬಲ ಎರಡು ಭೂಕಂಪ: 5 ಸಾವು

ಲಿಮಾ: ಪೆರು (Peru) ರಾಜಧಾನಿ ಲಿಮಾದ ಪೂರ್ವದಲ್ಲಿರುವ ಜುನಿನ್ ಪ್ರದೇಶದಲ್ಲಿ ಶನಿವಾರ ರಾತ್ರಿ ಎರಡು ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಅಪಾರ ನಷ್ಟವಾಗಿದೆ. ಕನಿಷ್ಠ ಐವರು ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. 300 ಜನರು ನಿರಾಶ್ರಿತರಾಗಿದ್ದಾರೆ.

ಪೆರುವಿನ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಪ್ರಕಾರ, ರಿಕ್ಟರ್‌ ಮಾಪಕದಲ್ಲಿ 5.1 ಹಾಗೂ 3.7 ಭೂಕಂಪನದ ತೀವ್ರತೆ ದಾಖಲಾಗಿದೆ. ಮೊದಲ ಕಂಪನ ಭೂಮಿಯ 24 ಕಿ.ಮೀ ಮತ್ತು ಎರಡನೆಯದು 18 ಕಿ.ಮೀ ಆಳದಲ್ಲಿ ಉಂಟಾಗಿದೆ.

ಹಲವೆಡೆ ಮನೆಗಳು ಕುಸಿದಿದ್ದು, ರಕ್ಷಣಾ ಕಾರ್ಯವು ಭರದಿಂದ ಸಾಗುತ್ತಿದೆ. ಸಾವು - ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.