ವಂದೇ ಮಾತರಂ ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಧ್ವನಿಸುತ್ತಿದೆ: ಪ್ರಧಾನಿ ಮೋದಿ
PM Narendra Modi: ನವದೆಹಲಿಯ ಕೆಂಪು ಕೋಟೆಯಲ್ಲಿಯಲ್ಲಿ 80ನೇ ಸ್ವಾತಂತ್ರ್ಯ ದಿನದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು.
ನವದೆಹಲಿ: ಇಲ್ಲಿನ ಕೆಂಪು ಕೋಟೆಯಲ್ಲಿಯಲ್ಲಿ 80ನೇ ಸ್ವಾತಂತ್ರ್ಯ ದಿನದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು. 21-ಗನ್ ಸೆಲ್ಯೂಟ್‌ನ್ನು ನೆರವೇರಿಸಲಾಯಿತು.
ದೇಶವನ್ನುದ್ದೇಶಿ ಮಾತನಾಡಿದ ಅವರು, ಈ ಸ್ವಾತಂತ್ರ್ಯ ದಿನದಂದು ಬಾಪು, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಇಂದು 'ವಂದೇ ಮಾತರಂ' ಎಂಬ ಘೋಷಣೆಯು ಪ್ರತಿಯೊಂದು ಹೃದಯದಲ್ಲಿ ಪ್ರತಿಧ್ವನಿಸುತ್ತಿದೆ. ತ್ರಿವರ್ಣ ಧ್ವಜವು ಎಲ್ಲರ ಮನೆಯಲ್ಲೂ ಹಾರಾಡುತ್ತಿದೆ. ದೇಶವು ಉತ್ಸಾಹದಿಂದ ಮುನ್ನಡೆಯುತ್ತಿದೆ ಎಂದು ಹೇಳಿದರು.
ಭಾರತ ಈ ವರ್ಷ 'ಫಾಸ್ಟ್ ಬ್ರೀಡರ್' ಪರಮಾಣು ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಪರಮಾಣು ಇಂಧನದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಇದು ದೊಡ್ಡ ಹೆಜ್ಜೆಯಾಗಿದೆ. ದೇಶದ ಇಂಧನ ಭದ್ರತೆಗೆ ಹೆಚ್ಚು ಪರಮಾಣು ವಿದ್ಯುತ್ ಸ್ಥಾವರಗಳ ಅಗತ್ಯವಿದೆ. ಎಂದರು.
ನಾವು ಮೂರು ಕೋಟಿ ಮಹಿಳೆಯನ್ನು 'ಲಖ್ಪತಿ ದೀದಿ'ಗಳಾಗಿ (ವಾರ್ಷಿಕ ರೂ.1 ಲಕ್ಷ ಆದಾಯ) ಮಾಡಲು ಪಣ ತೊಟ್ಟಿದ್ದೆವು. ಸದ್ಯ, ಅದನ್ನು ಸಾಧಿಸಲಾಗಿದೆ. ಈಗ ಆರು ಕೋಟಿ ಮಹಿಳೆಯರನ್ನು 'ಲಖ್ಪತಿ ದೀದಿ'ಯನ್ನಾಗಿಸಲು ಗುರಿ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಂಚಾಯತಿ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಚುನಾಯಿತ ಪ್ರತಿನಿಧಿಗಳಿದ್ದು, ಹಲವು ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಸಮರ್ಥವಾಗಿ ನಾಯಕತ್ವವನ್ನು ನಿಭಾಯಿಸುತ್ತುದ್ದಾರೆ ಎಂದರು.
ಇದನ್ನು ಗಮನದಲ್ಲಿಟ್ಟುಕೊಂಡು ನಾವು ಸಂಸತ್ತಿನಲ್ಲಿ 'ನಾರಿ ಶಕ್ತಿ ವಂದನ ಅಧಿನಿಯಮ್' (ಮಹಿಳಾ ಮೀಸಲಾತಿ ಕಾಯ್ದೆ) ಅಂಗೀಕರಿಸಿದ್ದೇವೆ. ಆದರೂ ಒಂದಿಲ್ಲೊಂದು ಕಾರಣಕ್ಕಾಗಿ, ಕಳೆದ 40 ವರ್ಷಗಳಿಂದ ಈ ಕನಸು ಪದೇ-ಪದೇ ರಾಜಕಾರಣಕ್ಕೆ ಬಲಿಯಾಗಿದೆ ಎಂದು ಹೇಳಿದರು.
ಈ 12 ವರ್ಷಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ರೈತರು, ಬಡವರು, ಮಧ್ಯಮ ವರ್ಗ, ಯುವಕರು, ಮಹಿಳೆಯರು ಹಾಗೂ ವಿವಿಧ ಸಮುದಾಯಗಳ ಕೊಡುಗೆಯನ್ನು ಅವರು ಶ್ಲಾಘಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.