Earthquake: ವಿಜಯಪುರದಲ್ಲಿ 3.5 ತೀವ್ರತೆ ಭೂಕಂಪ

Earthquake: ವಿಜಯಪುರ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ 12.26ಕ್ಕೆ 3.5 ತೀವ್ರತೆಯ ಭೂಕಂಪವಾಗಿದೆ.

Sep 29, 2026 - 11:35
Earthquake: ವಿಜಯಪುರದಲ್ಲಿ 3.5 ತೀವ್ರತೆ ಭೂಕಂಪ

Earthquake: ವಿಜಯಪುರ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ 12.26ಕ್ಕೆ 3.5 ತೀವ್ರತೆಯ ಭೂಕಂಪವಾಗಿದೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)  ತಿಳಿಸಿದೆ. 
 
ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯಿತಿಯಿಂದ 1.1 ಕಿ.ಮೀ. ನೈಋತ್ಯಕ್ಕೆ ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. 
 
ಭೂಮಿಯ 10 ಕಿ.ಮೀ ಆಳದಲ್ಲಿ ಕಂಪನವು ದಾಖಲಾಗಿದ್ದು, 50–60 ಕಿ.ಮೀ ವ್ಯಾಪ್ತಿಯಲ್ಲಿ ಈ ಕಂಪನದ ಅನುಭವವಾಗಿರುವ ಸಾಧ್ಯತೆಯಿದೆ. ತೀವ್ರತೆ ಕಡಿಮೆಯಿದ್ದು, ಯಾವುದೇ ಹಾನಿಯಾಗುವುದಿಲ್ಲ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
 
ವಾರದ ಹಿಂದೆಯೂ ವಿಜಯಪುರದಲ್ಲಿ ಕಂಪಿಸಿದ್ದ ಭೂಮಿ:
 
ಇದೇ 17 ರಂದು ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಸುತ್ತಮುತ್ತ ಭೂಕಂಪವಾಗಿತ್ತು. ರಿಕ್ಟರ್ ಮಾಪನದಲ್ಲಿ 3.6 ತೀವ್ರತೆ ದಾಖಲಾಗಿತ್ತು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.