ವಿವೇಕ ಪ್ರದೀಪ್ತಿ-2026 - ಪ್ರತಿಭಾ ಪುರಸ‍್ಕಾರ: ಸಾಧಕ ವಿದ‍್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ
Vvivekananda PU College: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ‍್ಲಿ ದ‍್ವಿತೀಯ ಪಿಯಸಿ ವಿದ‍್ಯಾರ್ಥಿಗಳ ಪ್ರತಿಭಾ ಪುರಸ‍್ಕಾರ ಕಾರ್ಯಕ್ರಮ 'ವಿವೇಕ ಪ್ರದೀಪ‍್ತಿ-2026' ಅದ್ದೂರಿಯಾಗಿ ನಡೆಯಿತು.
ಪುತ್ತೂರು: ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ‍್ಲಿ ದ‍್ವಿತೀಯ ಪಿಯಸಿ ವಿದ‍್ಯಾರ್ಥಿಗಳ ಪ್ರತಿಭಾ ಪುರಸ‍್ಕಾರ ಸಮಾರಂಭ 'ವಿವೇಕ ಪ್ರದೀಪ‍್ತಿ-2026' ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಮಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆದರ್ಶ ಆಸ್ಪತ್ರೆಯ ಸ್ರ‍್ತೀರೋಗ
ಭಾರತೀಯ ಸಂಸ್ಕೃತಿಯನ‍್ನು ಉಳಿಸಿ, ಬೆಳೆಸಿಕೊಂಡು ಶಿಕ್ಷಣ ನೀಡುವುದು ಅಷ‍್ಟು ಸುಲಭವಲ್ಲ. ವಿವೇಕಾನಂದ ವಿದ‍್ಯಾಸಂಸ‍್ಥೆ ಇಂತಹದೊಂದು ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ. ಜೀವನದಲ‍್ಲಿ ಮೇಲೆ ಬರಲು ಸತತ ಪರಿಶ್ರಮದ ಅಗತ್ಯವಿದೆ. ಪಠ್ಯದೊಂದಿಗೆ ಪಠ‍್ಯೇತರ ಚಟುವಟಿಕೆಗಳಲ‍್ಲಿ ತೊಡಗಿಸಿಕೊಂಡಾಗ, ವ್ಯಕ್ತಿತ್ವವು ಇನ್ನಷ‍್ಟು ಪ್ರಜ್ವಲಿಸಬಲ್ಲದು. ವಿದ‍್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶ ಬಳಸಿಕೊಂಡು, ಹೆತ್ತವರ ಕಷ್ಟಕ್ಕೆ ತಮ್ಮ ಶ್ರಮವನ‍್ನು ಧಾರೆ ಎರೆದಾಗ ಮಾತ್ರ ಸಮಾಜದಲ‍್ಲಿ ಉತ್ತಮ ಬದುಕನ‍್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಯೇನಪೋಯ ಮೆಡಿಕಲ್ ಕಾಲೇಜಿನ ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ‍್ಯಾಪಕ ಮತ್ತು ಕಾಲೇಜಿನ ಹಿರಿಯ ವಿದ‍್ಯಾರ್ಥಿ ಡಾ.ರಾಜೇಶ್ ಎಂ ಮಾತನಾಡಿ, ಗೆಲುವು ಒಮ್ಮೆಲೇ ದೊರೆಯವುದಿಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ತಾಳ್ಮೆ, ಆತ್ಮವಿಶ‍್ವಾಸ ಹಾಗೂ ದೃಢ ಸಂಕಲ್ಪ ಅಡಗಿರುತ್ತದೆ. ಪ್ರತಿಯೊಂದು ಸಾಧನೆಗೂ ಅನೇಕ ಸವಾಲುಗಳು ಮತ‍್ತು ಕೆಲವೊಮ‍್ಮೆ ವೈಫಲ್ಯಗಳು ಇರುತ್ತವೆ. ಆದರೆ ಸೋಲು ಅಂತ್ಯವಲ್ಲ. ಅದು ಯಶಸ‍್ಸಿನ ಮೆಟ‍್ಟಿಲು. ವೈಫಲ್ಯದಿಂದ ಪಾಠ ಕಲಿತು ಕಠಿಣ ಪರಿಶ್ರಮ, ನಿರಂತರತೆ ಹಾಗೂ ಶಿಸ್ತನ‍್ನು ಕೈಬಿಡದೆ ಮನ್ನಡೆಯವವರೇ ನಿಜವಾದ ಯಶಸ್ಸನ‍್ನು ಜೀವನದಲ‍್ಲಿ ಕಾಣುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಪುತ್ತೂರು ತಾಲೂಕಿನಲ‍್ಲೇ ಅತ್ಯಂತ ಹೆಚ‍್ಚು ಹಾಗೂ ವಿಶಿಷ್ಟ ಶ್ರೇಣಿಯ ಫಲಿತಾಂಶ ಪಡೆಯುವುದರಲ್ಲಿ ಮೊದಲಿಗರೆಂಬ ಹೆಮ‍್ಮೆ ನಮಗಿದೆ. ಫಲಿತಾಂಶದ ಜೊತೆಗೆ ಕ್ರೀಡೆ ಮತ್ತು ಇತರ ಕ‍್ಷೇತ್ರಗಳಲ‍್ಲಿ ನಮ್ಮ ವಿದ‍್ಯಾರ್ಥಿಗಳ ಸಾಧನೆ ಗಮನಾರ್ಹವಾಗಿದೆ. ಅವರು ಮೌಲ್ಯಯತ ಸಮಾಜದ ನಿರ್ಮಾಣದಲ‍್ಲಿ ಮನ್ನಡೆಯತ್ತಾರೆ ಎಂಬ ಭರವಸೆ ನಮ್ಮದು ಎಂದು ಹೇಳಿದರು.

ಮಖ್ಯ ಅತಿಥಿಗಳಾಗಿ

ಈ ಸಮಾರಂಭದಲ್ಲಿ ಉಪನ‍್ಯಾಸಕ,

