ತಂತ್ರಜ್ಞಾನ, ಸಮಾಜಸೇವೆ, ಕನ್ನಡಾಭಿಮಾನದ ಸಂಗಮ ಸುಂದರ್‌ರಾಜ್‌ ಪತ್ತಿ

ಅನೇಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಇವರ ಸಂಸ್ಥೆ ತಂತ್ರಜ್ಞಾನ ಸೇವೆಯಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಕನ್ನಡದ ಐತಿಹಾಸಿಕ ಕಪ್ಪು-ಬಿಳುಪಿನ “ಕಸ್ತೂರಿ ನಿವಾಸ” ಚಲನಚಿತ್ರವನ್ನು ಬಣ್ಣಕ್ಕೆ ಪರಿವರ್ತಿಸಿದ ಹೆಗ್ಗಳಿಕೆಯೂ ಇವರದೇ.

May 18, 2026 - 10:25
ತಂತ್ರಜ್ಞಾನ, ಸಮಾಜಸೇವೆ, ಕನ್ನಡಾಭಿಮಾನದ ಸಂಗಮ ಸುಂದರ್‌ರಾಜ್‌ ಪತ್ತಿ

ಬೆಂಗಳೂರು, ಮೇ 18: ಬೆಂಗಳೂರಿನ ಬಸವನಗುಡಿಯ  ಸುಂದರ್ ರಾಜ್ ಪತ್ತಿ ಅವರು ತಂತ್ರಜ್ಞಾನ, ಸಮಾಜಸೇವೆ ಮತ್ತು ಕನ್ನಡಾಭಿಮಾನವನ್ನು ಸಮನ್ವಯಗೊಳಿಸಿದ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ಕಂಪ್ಯೂಟರ್ ಎನ್ನುವುದು ಅಪರೂಪದ ವಸ್ತುವಾಗಿದ್ದ ಕಾಲದಲ್ಲೇ ಅದರ ಭವಿಷ್ಯವನ್ನು ಅರಿತು, ಯುವಕರಿಂದ ಹಿರಿಯರ ತನಕ ಸಾವಿರಾರು ಮಂದಿಗೆ ಕಂಪ್ಯೂಟರ್ ತರಬೇತಿ ನೀಡಿ ಬದುಕಿಗೆ ಹೊಸ ದಿಕ್ಕು ತೋರಿಸಿದವರು ಇವರು.

‘ಗುರು ಗೌತಮ್ ಇನ್ಫೋಟೆಕ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಇವರು, ಬೆಂಗಳೂರಿನ ಕಂಪ್ಯೂಟರ್ ರೆಂಟಲ್ಸ್ ಕ್ಷೇತ್ರದಲ್ಲಿ ಮುಂಚೂಣಿಯ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಅನೇಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಇವರ ಸಂಸ್ಥೆ ತಂತ್ರಜ್ಞಾನ ಸೇವೆಯಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಕನ್ನಡದ ಐತಿಹಾಸಿಕ ಕಪ್ಪು-ಬಿಳುಪಿನ “ಕಸ್ತೂರಿ ನಿವಾಸ” ಚಲನಚಿತ್ರವನ್ನು ಬಣ್ಣಕ್ಕೆ ಪರಿವರ್ತಿಸಿದ ಹೆಗ್ಗಳಿಕೆಯೂ ಇವರದೇ.

ವ್ಯವಹಾರ ಕ್ಷೇತ್ರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯರಾಗಿರುವ ಅವರು, ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದು, FKCCI, JITO ಸೇರಿದಂತೆ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜ್ಯೋತಿಷ್ಯ ಪ್ರವೀಣ ಹಾಗೂ ಹ್ಯಾಂಡ್‌ರೈಟಿಂಗ್ ಅನಲಿಸ್ಟ್ ಆಗಿಯೂ ಗುರುತಿಸಿಕೊಂಡಿರುವ ಸುಂದರ್ ರಾಜ್ ಪತ್ತಿ, ಬಹುಮುಖ ಪ್ರತಿಭೆಯ ವ್ಯಕ್ತಿ.

ಡಿಪ್ಲೊಮೋ ಶಿಕ್ಷಣದಿಂದ ವೃತ್ತಿಜೀವನ ಆರಂಭಿಸಿದ ಅವರು, ಕಲಿಕೆಯ ಹಂಬಲವನ್ನು ಎಂದಿಗೂ ಕಡಿಮೆ ಮಾಡಿಕೊಳ್ಳಲಿಲ್ಲ. ತಮ್ಮ 54ನೇ ವಯಸ್ಸಿನಲ್ಲಿ ಬಿ.ಎ ಪದವಿ ಪೂರ್ಣಗೊಳಿಸಿ, ಪ್ರಸ್ತುತ ಕನ್ನಡ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಡಾಕ್ಟರೇಟ್ ಮಾಡುವ ಗುರಿಯನ್ನೂ ಹೊಂದಿದ್ದಾರೆ.
ತಂತ್ರಜ್ಞಾನದಲ್ಲಿ ಸಾಧನೆ, ಸಮಾಜಸೇವೆಯಲ್ಲಿ ತೊಡಗಿ ಕನ್ನಡದ ಮೇಲೆ ಅಭಿಮಾನ ಮತ್ತು ನಿರಂತರ ಅಧ್ಯಯನ — ಈ ಎಲ್ಲ ಗುಣಗಳ ಸಮನ್ವಯವೇ  ಸುಂದರ್ ರಾಜ್ ಪತ್ತಿ ಅವರ ವ್ಯಕ್ತಿತ್ವದ ವಿಶೇಷತೆ.