ದಿನ ಭವಿಷ್ಯ: ಜುಲೈ 29, 2026.. ಯಾವ ರಾಶಿಗೆ ಏನು ಫಲ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಹೆಚ್ಚು ಅನುಕೂಲಕರವಾದ ಬುಧವಾರ ಅಪೇಕ್ಷೆ ಪಟ್ಟವರಿಗೆ ಸಹಾಯ. ಕುಟುಂಬದಲ್ಲಿ ಹರ್ಷೋಲ್ಲಾಸದ ಕ್ಷಣ..ಹಿರಿಯರಿಗೆ,ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ.ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಜಯ.ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
ವೃಷಭ:
ಯಶಸ್ವಿಯಾದ ಆಯೋಜಕತ್ವ.. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ.. ಹಿರಿಯರ ಆರೋಗ್ಯದತ್ತ ಗಮನವಿರಲಿ.ಸಂಪಾದನೆಯ. ಹೊಸ ಮಾರ್ಗ ಅನ್ವೇಷಣೆ.ಮಕ್ಕಳಿಗೆ ಸಂದರ್ಭಾನುಸಾರ ಮಾರ್ಗದರ್ಶನ.ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಮಿಥುನ:
ಬಯಸಿದ ಕಾರ್ಯಗಳು ಕೈಗೂಡುವ ದಿನ.. ತಾವಾಗಿ ಬಂದ ಅವಕಾಶಗಳ ಸದುಪಯೋಗ. ಉದ್ಯೋಗಾನ್ವೇಷಿಗಳಿಗೆ ಅನುಕೂಲ.. ಆವಶ್ಯಕ ಸಾಧನಗಳ ಖರೀದಿಗೆ ಹಣ ಖರ್ಚು. ಸತ್ಕಾರ್ಯಕ್ಕೆ ಕೈಜೋಡಿಸಿ ಸಾರ್ಥಕ ಭಾವ.ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಕರ್ಕಾಟಕ:
ಕೀರ್ತಿ ತರುವಂತಹ ಹೊಣೆಗಾರಿಕೆಗಳು.. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ನೊಂದವರಿಗೆ ಧೈರ್ಯ ತುಂಬುವ ಮಾತುಗಳು ಬರಲಿ.. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ.. ಸಂಸಾರದಲ್ಲಿ ಸಾಮರಸ್ಯ, ಪ್ರೀತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಸಿಂಹ:
ಸಾಂಸಾರಿಕ ತಾಪತ್ರಯಗಳಿಂದ ಬಿಡುಗಡೆ.. ವೃದ್ಧ ದಂಪತಿಗಳಿಗೆ ನೆಮ್ಮದಿ. ಹಿರಿಯರ ಆರೋಗ್ಯ ತೃಪ್ತಿಕರ.. ಮನೆಯಲ್ಲಿ ಸಂತಸದ ವಾತಾವರಣ ವ್ಯವಹಾರ ಸಂಬಂಧ ಸಣ್ಣಪ್ರಯಾಣ ಸಂಭವ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ಕನ್ಯಾ:
ಸಂಪೂರ್ಣ ಆರೋಗ್ಯದ ಆನಂದ.. ವೃತ್ತಿಪರ ಉದ್ಯೋಗಸ್ಥರಿಗೆ ಕಾರ್ಯದ ಹೊರೆ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ ಅನುರಾಗ ವೃದ್ಧಿ. ವಿದೇಶದಿಂದ ಬಂದ ಬಂಧುಗಳ ಭೇಟಿ. ಗಣೇಶ ದ್ವಾದಶನಾಮ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ತುಲಾ:
ದೈಹಿಕ, ಮಾನಸಿಕ ದಾರ್ಢ್ಯದ ಅನುಭವ.. ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈ. ಖೋಟಾ ಜ್ಯೋತಿಷಿಗಳ ಅನಾವರಣ. ಗೃಹೋದ್ಯಮಗಳಿಗೆ ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ ವಿಹಿತ. ಗಣೇಶ ಕವಚ ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ವೃಶ್ಚಿಕ:
ಅಸೂಯೆಯ ಮಾತುಗಳಿಗೆ ಕಿವಿಗೊಡಬೇಡಿ.. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
ಧನು:
ಪರಿಚಿತರಿಂದ ಅಯಾಚಿತ ಸಹಾಯ.. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕೈಗೂಡಿದ ಅಸಾಧ್ಯ ಕಾರ್ಯ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಶನಿಸ್ತೋತ್ರ ಓದಿ.
ಮಕರ:
ಆಶ್ಚರ್ಯಕರವಾದ ಕಾರ್ಯಸಾಧನೆ.. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ. ಹತ್ತಿರದ ವಿಷ್ಣುಕ್ಷೇತ್ರಕ್ಕೆ ಸಂದರ್ಶನ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.
ಕುಂಭ:
ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು.. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ.ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಅವಕಾಶ ಸೃಷ್ಟಿ.ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು.. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಕ್ಷೇಮ. ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ತೊಂದರೆ ದೂರ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಮಕ್ಕಳ ಶೈಕ್ಷಣಿಕ ಆಸಕ್ತಿಗೆ ಪೋಷಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.