ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
Indraprastha Vidyalaya: ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ 'ಇಂದ್ರಪ್ರಸ್ಥ ವಿದ್ಯಾಲಯ'ದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಲಭಿಸಿದೆ.
ಉಪ್ಪಿನಂಗಡಿ: ವಿದ್ಯಾಭಾರತಿ ರಾಜ್ಯ ಮಟ್ಟದ ಜ್ಞಾನ ವಿಜ್ಞಾನ ಮೇಳ, ವೇದಗಣಿತ & ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆ, ಈಚೆಗೆ ಪುತ್ತೂರಿನ 'ವಿವೇಕಾನಂದ ಸೆಂಟ್ರಲ್ ಸ್ಕೂಲ್'ನಲ್ಲಿ ಜರುಗಿತು.
ಈ ಸ್ಪರ್ಧೆಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ಜಯಿಸಿದ್ದಾರೆ. ಕಿಶೋರ ವರ್ಗದ ಗಣಿತ ಮಾದರಿಯಲ್ಲಿ ಅನಘ್ ಹಾಗೂ ವಿಜ್ಞಾನ ಮಾದರಿಯಲ್ಲಿ ಧಾರಾ ಪ್ರಥಮ ಸ್ಥಾನ ಪಡೆದಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲ ವರ್ಗದ ವಿಜ್ಞಾನ ಮಾದರಿಯಲ್ಲಿ 8ನೇ ತರಗತಿಯ ಸ್ವಸ್ತಿ ಬಿ, ಗಣಿತ ಮಾದರಿಯಲ್ಲಿ ಅನುಪ್ರಿಯ ಎನ್.ಕೆ ಮತ್ತು ಕಿಶೋರ ವರ್ಗ ಗಣಿತ ಮಾದರಿಯಲ್ಲಿ 9ನೇ ತರಗತಿಯ ಪ್ರಾಪ್ತಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಶೋರ ವರ್ಗ ವಿಜ್ಞಾನ ಮಾದರಿಯಲ್ಲಿ 10ನೇ ತರಗತಿಯ ಪೂರ್ವಿ ಬಿ.ಜಿ ಹಾಗೂ ಬಾಲ ವರ್ಗದಲ್ಲಿ 6ನೇ ತರಗತಿಯ ಹಿಮಾಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥ ವೀಣಾ ಆರ್ ಪ್ರಸಾದ್ ಪ್ರಕಟಣೆಗೆ ತಿಳಿಸಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.