ಆ.23ಕ್ಕೆ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ನಟನೆಯ 'ಬನ' ಸಿನಿಮಾ ರಿಲೀಸ್
Bana film: ಕರಾವಳಿಯ ಜನಪ್ರಿಯ ಪತ್ರಕರ್ತ, ನಿರೂಪಕ & ನಟ ಜಯಪ್ರಕಾಶ್ ಶೆಟ್ಟಿ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಬನ' ಸಿನಿಮಾ ಆಗಸ್ಟ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕರಾವಳಿಯ ಜನಪ್ರಿಯ ಪತ್ರಕರ್ತ, ನಿರೂಪಕ & ನಟ ಜಯಪ್ರಕಾಶ್ ಶೆಟ್ಟಿ (Jayaprakash Shetty) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಬನ' ಸಿನಿಮಾ ಆಗಸ್ಟ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ತೆರೆ ಕಾಣಲಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ರೂಪಶ್ರೀ ವರ್ಕಾಡಿ, ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದು, ಮತ್ತೊಮ್ಮೆ ಪ್ರೇಕ್ಷಕರ ಮನಗೆಲ್ಲಲು ರೆಡಿಯಾಗಿದ್ದಾರೆ.
ಇತ್ತೀಚೆಗೆ ಚಿತ್ರತಂಡ ಜಯಪ್ರಕಾಶ್ ಶೆಟ್ಟಿ ಪಾತ್ರದ ಪೋಸ್ಟರ್ ಹೊರತಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಪೋಸ್ಟರ್‌ನಲ್ಲಿ ಅವರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ತುಳು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಈ ಸಿನಿಮಾದಲ್ಲಿ ಜಯಪ್ರಕಾಶ್ ಶೆಟ್ಟಿ ಪಾತ್ರವು ಚಿತ್ರಕಥೆಗೆ ದೊಡ್ಡ ತಿರುವು ನೀಡುತ್ತದೆಯಂತೆ. ಇದು ಕರಾವಳಿಯ ನಾಗಾರಾಧನೆ, ನಂಬಿಕೆ ಹಾಗೂ ಸಂಪ್ರದಾಯದ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಚಿತ್ರವಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಅದ್ಧೂರಿಯಾಗಿ ಅನಾವರಣಗೊಳಿಸುವ ಪ್ರಯತ್ನವು ಚಿತ್ರತಂಡದಿಂದ ನಡೆದಿದೆ.
ಪ್ರತಿಭಾವಂತ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಸುಳಿಯಾಲು ಆಕ್ಷನ್ ಕಟ್ ಹೇಳಿದ್ದು, ಮನೋಹರ್ ರೈ ವೈಪಾಲ ನಿರ್ಮಿಸಿದ್ದಾರೆ. ಸದ್ಯ ಕರಾವಳಿ ಭಾಗದಲ್ಲಿ ಈ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.