Karnataka Bank: ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಡಾ.ಅರುಣ್ ಶ್ಯಾಮ್ ನೇಮಕ

Karnataka Bank: ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ನೂತನ ಸ್ವತಂತ್ರ ನಿರ್ದೇಶಕರಾಗಿ ಹಿರಿಯ ನ್ಯಾಯವಾದಿ ಡಾ.ಎಂ. ಅರುಣ್ ಶ್ಯಾಮ್ ನೇಮಕಗೊಂಡಿದ್ದಾರೆ.

Jul 19, 2026 - 17:20
Jul 19, 2026 - 17:20
Karnataka Bank: ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಡಾ.ಅರುಣ್ ಶ್ಯಾಮ್ ನೇಮಕ

ಮಂಗಳೂರು: ನೂರು ವರ್ಷ ಪೂರೈಸಿರುವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ನೂತನ ಸ್ವತಂತ್ರ ನಿರ್ದೇಶಕರಾಗಿ ಹಿರಿಯ ನ್ಯಾಯವಾದಿ ಡಾ.ಎಂ. ಅರುಣ್ ಶ್ಯಾಮ್ ನೇಮಕಗೊಂಡಿದ್ದಾರೆ. 

ಬ್ಯಾಂಕಿನ ಆಡಳಿತ ಬಲಪಡಿಸುವ ಉದ್ದೇಶದಿಂದ ಅವರನ್ನು ಮಂಡಳಿಗೆ ಸೇರಿಸಲಾಗಿದೆ. ಪ್ರಸ್ತುತ ಮಂಡಳಿಯಲ್ಲಿ ಪಿ.ಪ್ರದೀಪ್ ಕುಮಾರ್ ಅರೆಕಾಲಿಕ ಅಧ್ಯಕ್ಷರಾಗಿದ್ದು, ಡಾ.ಅರುಣ್ ಶ್ಯಾಮ್ ಸೇರಿ 7 ಮಂದಿ ಸ್ವತಂತ್ರ ನಿರ್ದೇಶಕರಿದ್ದಾರೆ.

ಮೂಲತಃ ವಿಟ್ಲ ಸಮೀಪದ ಕೊಳ್ನಾಡು ಪಂಜಿಗದ್ದೆ ನಿವಾಸಿಯಾಗಿದ್ದು, ಪುತ್ತೂರು ವಿವೇಕಾನಂದ ಕಾಲೇಜು ಮತ್ತು ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದು, 2006 ರಿಂದ ಬೆಂಗಳೂರು ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.