KEA: ಪಿಜಿಸಿಇಟಿ-2026 ಬರೆದವರ ಗಮನಕ್ಕೆ

KEA: ಪಿಜಿಸಿಇಟಿ 2026ರ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ, ಎಲ್ಲಾ ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ತಿಳಿಸಿದೆ.

Oct 9, 2026 - 16:57
KEA: ಪಿಜಿಸಿಇಟಿ-2026 ಬರೆದವರ ಗಮನಕ್ಕೆ

ಬೆಂಗಳೂರು: ಪಿಜಿಸಿಇಟಿ 2026ರ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ, ಎಲ್ಲಾ ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ. 

ಅ.13 ರಂದು ಬೆಳಿಗ್ಗೆ 10 ಗಂಟೆವರೆಗೆ ಚಾಯ್ಸ್ ಹಾಕಬಹುದು. ಈಗಾಗಲೇ, ಕಾಲೇಜುಗಳಲ್ಲಿ ಪ್ರವೇಶ ಪಡೆದವರು ಕೂಡ ಚಾಯ್ಸ್ ಹಾಕಬಹುದು. 

ಅಲ್ಲದೆ, ಅಂದು (ಅ.13) ಮಧ್ಯಾಹ್ನ 2 ರಿಂದ ಅ.15 ರ ಬೆಳಿಗ್ಗೆ 10 ಗಂಟೆವರೆಗೆ ಆಪ್ಷನ್ಸ್ ಅನ್ನು ಮೇಲೆ-ಕೆಳಗೆ (Rearrange) ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಇನ್ನು, ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಲು ಅವಕಾಶ ನೀಡಬೇಕೆಂದು ಮತ್ತು ಯುಜಿ & ಪಿಜಿ ಕೋರ್ಸ್‌ಗಳ ಪ್ರವೇಶಕ್ಕೆ ಪ್ರತ್ಯೇಕ ವೇಳಾಪಟ್ಟಿ ನೀಡಲು ಎಐಸಿಟಿಎಗೆ ನಿರ್ದೇಶನ ಕೊಡಬೇಕೆಂದು ಮನವಿ ಮಾಡಿ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ತೀರ್ಮಾನದವರೆಗೆ, ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ಹೇಳಿದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.