ಮಂತ್ರಾಲಯ: 40 ಎಕರೆಯಲ್ಲಿ ಜಲಾಶಯ ನಿರ್ಮಾಣ.. ಕುಡಿಯುವ ನೀರಿನ ಸಮಸ್ಯೆಗೆ ಗುಡ್‌ಬೈ!

Mantralayam: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠವು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ರೂ.50 ಕೋಟಿ ವೆಚ್ಚದಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಜಲಾಶಯ ನಿರ್ಮಾಣಕ್ಕೆ ಮುಂದಾಗಿದೆ.

Jul 29, 2026 - 16:56
ಮಂತ್ರಾಲಯ: 40 ಎಕರೆಯಲ್ಲಿ ಜಲಾಶಯ ನಿರ್ಮಾಣ.. ಕುಡಿಯುವ ನೀರಿನ ಸಮಸ್ಯೆಗೆ ಗುಡ್‌ಬೈ!

ರಾಯಚೂರು: ಕರ್ನಾಟಕ - ಆಂಧ್ರ ಗಡಿಗೆ ಹೊಂದಿಕೊಂಡಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠವು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಮಠದ ವತಿಯಿಂದ ಖಾಸಗಿಯಾಗಿ ರೂ.50 ಕೋಟಿ ವೆಚ್ಚದಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಜಲಾಶಯ ನಿರ್ಮಾಣಕ್ಕೆ ಮುಂದಾಗಿದೆ.

ಮಂತ್ರಾಲಯಕ್ಕೆ ರಾಯರ ದರ್ಶನಕಾಗಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ತುಂಗಭದ್ರಾ ನದಿ ಬತ್ತಿ ಹೋದರೆ, ಅದು ಮತ್ತಷ್ಟು ಬಿಗಡಾಯಿಸುತ್ತದೆ.

ಕಳೆದ ಬಾರಿ ನದಿ ಸಂಪೂರ್ಣ ಬತ್ತಿದಾಗ, ಟ್ಯಾಂಕರ್ ಮೂಲಕ ನೀರು ತರಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಭಕ್ತರಿಗೆ, ಮಠದ ವಿದ್ಯಾರ್ಥಿ ನಿಲಯ, ಅನ್ನದಾನ ಹಾಗೂ ಗೋಶಾಲೆಗಳಿಗೆ ನೀರಿನ ಕೊರತೆ ಉಂಟಾಗಿತ್ತು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಮಠವು ಜಲಾಶಯ ನಿರ್ಮಾಣಕ್ಕೆ ಕೈಹಾಕಿದೆ.

ನಾಳೆ ಚಾಲನೆ:

ನಾಳೆ (ಜುಲೈ  30) ಬೆಳಗ್ಗೆ 10 ಗಂಟೆಗೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು, ಈ ಬೃಹತ್ ಯೋಜನೆಗೆ ಚಾಲನೆ ನೀಡಲಿದ್ದಾರೆ. 

ಮಠದಿಂದ 10 ಕಿ.ಮೀ ದೂರದಲ್ಲಿ ಈ ಜಲಾಶಯ ನಿರ್ಮಾಣವಾಗಲಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಯೂ ಶುರುವಾಗಲಿದೆ. ಹೆಚ್‌ಸಿಎಲ್ ಸಂಸ್ಥೆಯಿಂದ ಅನುದಾನ ಬಂದಿದ್ದು, ಸಂಸದರು ಹಾಗೂ ಶಾಸಕರಿಂದಲೂ ಸಹಕಾರ ದೊರೆತಿದೆ ಎಂದು ಮಠದ ಮೂಲಗಳು ಹೇಳಿವೆ. ಈ ಯೋಜನೆಯಿಂದ ಮಂತ್ರಾಲಯದ ಭಕ್ತರಿಗೆ ಮಾತ್ರವಲ್ಲ, ಸುತ್ತಮುತ್ತಲಿನ ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆಗೂ ಮುಕ್ತಿ ದೊರೆಯಲಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.