Ambika NEET Academy: ಅಂಬಿಕಾ ನೀಟ್ ಅಕಾಡೆಮಿಯಲ್ಲಿ ರಿಪೀಟರ್ಸ್ ಬ್ಯಾಚ್‌ಗೆ ದಾಖಲಾತಿ ಆರಂಭ, ಭರ್ಜರಿ ಶುಲ್ಕ ರಿಯಾಯಿತಿ

Ambika NEET Academy: ಪುತ್ತೂರಿನ ಅಂಬಿಕಾ ನೀಟ್ ಅಕಾಡೆಮಿಯಲ್ಲಿ ರಿಪೀಟರ್ಸ್ ಬ್ಯಾಚ್‌ಗೆ ದಾಖಲಾತಿ ಆರಂಭವಾಗಿದ್ದು, ಭರ್ಜರಿ ಶುಲ್ಕ ರಿಯಾಯಿತಿಯನ್ನು ನೀಡಲಾಗಿದೆ.

Jul 20, 2026 - 16:07
Jul 20, 2026 - 16:09
Ambika NEET Academy: ಅಂಬಿಕಾ ನೀಟ್ ಅಕಾಡೆಮಿಯಲ್ಲಿ ರಿಪೀಟರ್ಸ್ ಬ್ಯಾಚ್‌ಗೆ ದಾಖಲಾತಿ ಆರಂಭ, ಭರ್ಜರಿ ಶುಲ್ಕ ರಿಯಾಯಿತಿ

ಪುತ್ತೂರು: ಡಾಕ್ಟರ್ ಆಗಬೇಕೆಂಬುದು ವಿಜ್ಞಾನ ವಿಭಾಗದ ಬಹುತೇಕ ವಿದ್ಯಾರ್ಥಿಗಳ ಅತಿದೊಡ್ಡ ಕನಸು. ಆದರೆ, ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್ (NEET) ಪರೀಕ್ಷೆಯಲ್ಲಿ ಭಾರೀ ಸ್ಪರ್ಧೆಯಿಂದಾಗಿ, ಕೆಲವೊಮ್ಮೆ ಮೊದಲ ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ದ್ವಿತೀಯ ಪಿಯುಸಿ ಪೂರೈಸಿ ನೀಟ್ ಪರೀಕ್ಷೆಯನ್ನು ಎದುರಿಸಿ, ವೈದ್ಯಕೀಯ ಸೀಟು ಪಡೆಯಲು ಅಗತ್ಯವಿರುವ ಉತ್ತಮ ಅಂಕ ಗಳಿಸಲು ಎಡವಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಸುವರ್ಣಾವಕಾಶ ಒದಗಿ ಬಂದಿದೆ. 
 
ನಗರದ ಪ್ರತಿಷ್ಠಿತ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ನೀಟ್ ಅಕಾಡೆಮಿ (Ambika NEET Academy) ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಲು ನೀಟ್ ರಿಪೀಟರ್ಸ್ ಬ್ಯಾಚ್‌ಗಾಗಿ (NEET Repeaters Batch) ದಾಖಲಾತಿಯನ್ನು ಪ್ರಾರಂಭಿಸಿದೆ. 

​ಅಮೋಘ ಫಲಿತಾಂಶ & ಗುಣಮಟ್ಟದ ಶಿಕ್ಷಣ:

ಕಳೆದ ಮೂರು ವರ್ಷಗಳಿಂದ ನೀಟ್ ರಿಪೀಟರ್ಸ್ ಬ್ಯಾಚ್ ತರಗತಿಗಳನ್ನು 'ಅಂಬಿಕಾ ನೀಟ್ ಅಕಾಡೆಮಿ'ಯು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿ ವರ್ಷವು ಹತ್ತಾರು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಸಂಸ್ಥೆಯ ಶೈಕ್ಷಣಿಕ ಬದ್ಧತೆ ಹಾಗೂ ಕರಾರುವಕ್ಕಾದ ಮಾರ್ಗದರ್ಶನಕ್ಕೆ ಸಾಕ್ಷಿ ಎಂಬಂತೆ, ಪ್ರಸ್ತುತ ವರ್ಷ ನೀಟ್ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳ ಪೈಕಿ 65% ಮಂದಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯು ಅಕಾಡೆಮಿಯು ನೀಡುತ್ತಿರುವ ಗುಣಮಟ್ಟದ ಶಿಕ್ಷಣವನ್ನು ಖಾತ್ರಿ ಪಡಿಸುತ್ತದೆ.

ವಿಶಿಷ್ಟ ಬೋಧನಾ ಕ್ರಮ:

ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಸಂಸ್ಥೆಯು ವ್ಯವಸ್ಥಿತ ಬೋಧನಾ ಕ್ರಮವನ್ನು ಅಳವಡಿಸಿಕೊಂಡಿದೆ. ಇಲ್ಲಿನ ರಿಪೀಟರ್ಸ್ ತರಗತಿಗಳಲ್ಲಿ ಪ್ರತಿದಿನ ಪ್ರಾಯೋಗಿಕ ಅನುಭವವನ್ನು ನೀಡಲಾಗುತ್ತದೆ. ವಾರಕ್ಕೊಮ್ಮೆ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ.  

​ಈ ನಿರಂತರ ತರಬೇತಿಯಿಂದಾಗಿ, ವಿದ್ಯಾರ್ಥಿಗಳಿಗೆ ನೀಟ್ ಸಿಲೆಬಸ್‌ನ ಪ್ರತಿಯೊಂದು ವಿಷಯಗಳಲ್ಲೂ ಮಾದರಿ ಪರೀಕ್ಷೆ ಎದುರಿಸಿದಂತಹ ಸ್ಪಷ್ಟ ಅನುಭವ ಲಭ್ಯವಾಗುತ್ತದೆ. ಇದರಿಂದ ಅಂತಿಮ ಪರೀಕ್ಷೆಯು ಅವರಿಗೆ ಅತ್ಯಂತ ಸುಲಭ ಸಾಧ್ಯವೆನಿಸುತ್ತದೆ. ಜೊತೆಗೆ ಅನುಭವಿ ಪ್ರಾಧ್ಯಾಪಕರಿಂದ ನಿರಂತರ ಸಲಹೆ ಹಾಗೂ ಸೂಚನೆಗಳು ದೊರೆಯುತ್ತವೆ.  

ಪರಸ್ಪರ ಸಂವಹನದೊಂದಿಗೆ ಚರ್ಚಾ ತರಗತಿಗಳು, ವ್ಯಾಪಕವಾದ ಓದಿಗೆ ಪೂರಕವಾಗಿರುವ ಉತ್ತಮ ಅಧ್ಯಯನ ಸಾಮಗ್ರಿಗಳು ಸೇರಿದಂತೆ ಹತ್ತಾರು ಅಗತ್ಯ ವಿಷಯಗಳನ್ನು ನೀಟ್ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.  

​ವಿಶೇಷ ಶುಲ್ಕ ರಿಯಾಯಿತಿ:

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ 'ಅಂಬಿಕಾ ನೀಟ್ ಅಕಾಡೆಮಿ'ಯು ಆಕರ್ಷಕ ವಿಶೇಷ ಶುಲ್ಕ ರಿಯಾಯಿತಿಯನ್ನು ಘೋಷಿಸಿದೆ.

​ಪ್ರಸ್ತುತ ಪ್ರಕಟಗೊಂಡಿರುವ ನೀಟ್ ಫಲಿತಾಂಶದಲ್ಲಿ 450ಕ್ಕೂ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ 75% ಶುಲ್ಕ ವಿನಾಯಿತಿ ದೊರೆಯಲಿದೆ. 400ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 50% ಶುಲ್ಕ ವಿನಾಯಿತಿ ನೀಡಲಾಗುತ್ತದೆ. ​350ಕ್ಕಿಂತ ಅಧಿಕ ಅಂಕ ಪಡೆದವರಿಗೆ 25%  ಶುಲ್ಕ ವಿನಾಯಿತಿ ಲಭ್ಯವಾಗಲಿದೆ. ​300ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 10% ಶುಲ್ಕ ವಿನಾಯಿತಿ ಸಿಗಲಿದೆ.

ವೈದ್ಯಕೀಯ ಸೀಟು ಪಡೆಯಲೇಬೇಕು ಎಂದು ಪಣ ತೊಟ್ಟಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. ಆಸಕ್ತರು ತಡ ಮಾಡದೆ, ದಾಖಲಾತಿ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆಗಳಾದ 9448835488 ಅಥವಾ 9482822800ಗೆ ಕರೆಮಾಡಿ ಸಂಪರ್ಕಿಸಬಹುದಾಗಿದೆ.