ಪುತ್ತೂರು: ಕೆಮ್ಮಾರದಲ್ಲಿ ದೋಸೆ ಮೇಳ.. ಇಲ್ಲಿದೆ ವಿವರ

Kemmara Dosa Fair: ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ದ್ವಾರಕಾ ರಿಫ್ರೆಶ್ ಮೆಂಟ್ಸ್ ಹಾಗೂ ಸಂತೃಪ್ತಿ ವೆಜ್ ಸಹಯೋಗದಲ್ಲಿ 'ದೋಸೆ ಮೇಳ' ಏರ್ಪಡಿಸಲಾಗಿದೆ.

Jul 22, 2026 - 09:44
Jul 22, 2026 - 09:46
ಪುತ್ತೂರು: ಕೆಮ್ಮಾರದಲ್ಲಿ ದೋಸೆ ಮೇಳ.. ಇಲ್ಲಿದೆ ವಿವರ

ಪುತ್ತೂರು: ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ದ್ವಾರಕಾ ರಿಫ್ರೆಶ್ ಮೆಂಟ್ಸ್ ಹಾಗೂ ಸಂತೃಪ್ತಿ ವೆಜ್ ಸಹಯೋಗದಲ್ಲಿ 'ದೋಸೆ ಮೇಳ' ಏರ್ಪಡಿಸಲಾಗಿದೆ. ಜುಲೈ 24, 25 ಹಾಗೂ 26 ರಂದು ಸಂಜೆ 4 ರಿಂದ 10 ಗಂಟೆವರೆಗೆ ಈ ವೇಳೆ ನಡೆಯಲಿದೆ. 
 
ಜುಲೈ 24 ರಂದು ಸಂಜೆ 4.30ಕ್ಕೆ 'ದೋಸೆ ಮೇಳ'ದ ಉದ್ಘಾಟನಾ ಸಮಾರಂಭ ಜರುಗಲಿದೆ. ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 
 
ದೋಸೆ ಮೇಳವನ್ನು 'ಬಳ್ಳಿ ಆಯುರ್ ಗ್ರಾಮ'ದ ನಿರ್ಮಾತೃ ಡಾ.ಸುಪ್ರೀತ್ ಲೋಬೋ ನಡೆಸಿಕೊಡಲಿದ್ದಾರೆ. ಈ ಸಮಾರಂಭದಲ್ಲಿ ಸಂತೃಪ್ತಿ ವೆಜ್ ಮಾಲೀಕ ಗಿರೀಶ್ ಮಲ್ಲ, ಸಾವಯವ ತಜ್ಞ ಸುಹಾಸ್ ಮರಿಕೆ, ಪಾಕಪ್ರವೀಣ ರವಿ ಕುಂಟಿನಿ, ದ್ವಾರಕಾ ಸಮೂಹ ಸಂಸ್ಥೆಗಳ ಸಹಾಯಕ ನಿರ್ದೇಶಕಿ ಅಶ್ವಿನಿ ಎನ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ ಎನ್ ಉಪಸ್ಥಿತರಿರಲಿದ್ದಾರೆ. 
 
ಆ ದಿನ ಸಂಜೆ 6.30ಕ್ಕೆ ವೆಂಕಟಕೃಷ್ಣ ಭಟ್ಟ ಗುಂಡ್ಯಡ್ಕ ಹಾಗೂ ಬಳಗದವರಿಂದ 'ಭಕ್ತಿ ಭಾವ ಗಾನ ಲಹರಿ'ಯನ್ನು ಏರ್ಪಡಿಸಲಾಗಿದೆ. ಜುಲೈ 25 ರಂದು ಸಂಜೆ 4.30ಕ್ಕೆ ಯಜ್ಞೇಶ ಆಚಾರ್ ಮತ್ತು ಬಳಗವರಿಂದ 'ಭಕ್ತಿ ಭಾವ ಗಾನ ಲಹರಿ' ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ 6 ರಿಂದ 9 ರವರೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅವರಿಂದ 'ವಿದುರಾತಿಥ್ಯ' ಎಂಬ ತಾಳಮದ್ದಳೆ ನಡೆಯಲಿದೆ.  
 
ಜುಲೈ 26 ರಂದು ಸಂಜೆ 4.30ಕ್ಕೆ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದ್ವಾರಕಾ ಸಮೂಹ ಸಂಸ್ಥೆಗಳ ಎಂಡಿ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯರು ಸಮಾರೋಪ ಭಾಷಣ ಮಾಡಲಿದ್ದಾರೆ. ಉದ್ಯಮಿ ಕೃಷ್ಣಮೋಹನ ಹಾಗೂ ದ್ವಾರಕಾ ಪ್ರತಿಷ್ಠಾನದ ನಿರ್ದೇಶಕಿ ಅಮೃತಾ ಶಾನುಭಾಗ್ ಭಾಗವಹಿಸಲಿದ್ದಾರೆ. ಸಂಜೆ 6 ರಿಂದ 9 ರವರೆಗೆ ವಿದ್ವಾನ್ ಕಲಾದೀಪ ದೀಪಕ್ ಕುಮಾರ್ ಹಾಗೂ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
 
ದೋಸೆ ಮೇಳದಲ್ಲಿ ಹಲಸಿನ ಹಣ್ಣು ದೋಸೆ, ಮಾವಿನಹಣ್ಣು ದೋಸೆ, ಸ್ಪ್ರಿಂಗ್ ದೋಸೆ, ಅವಲಕ್ಕಿ ದೋಸೆ, ಮೆಂತೆ ದೋಸೆ, ಪಾಲಕ್ ದೋಸೆ ಹಾಗೂ ಪನೀರ್ ಮಸಾಲದೋಸೆ ಸೇರಿದಂತೆ 50ಕ್ಕೂ ದೋಸೆಗಳ ರಸದೌತಣವಿರಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.