ಪುತ್ತೂರು: ಪುರುಷರಕಟ್ಟೆ ನ್ಯಾಯ ಒದಗಿಸಲು ಮನವಿ

Puttur: ಇಲ್ಲಿನ ಪುರುಷರಕಟ್ಟೆಯ ಸಾಂತಪ್ಪ ಗೌಡರ ಮಗಳಿಗೆ ಚೂರಿ ತೋರಿಸಿ ಹೆದರಿಸಿದ ಪ್ರಕರಣ ಸಂಬಂಧ, ಪೊಲೀಸರು ತಪ್ಪಿತಸ್ತರ ಮೇಲೆ ಕಾನೂನು ಕ್ರಮ ಜರುಗಿಸದೆ ದೂರುದಾರರ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಚಾರವನ್ನು ಪ್ರಶ್ನಿಸಿ, ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

Jul 20, 2026 - 12:43
ಪುತ್ತೂರು: ಪುರುಷರಕಟ್ಟೆ ನ್ಯಾಯ ಒದಗಿಸಲು ಮನವಿ

ಪುತ್ತೂರು: ಇಲ್ಲಿನ ಪುರುಷರಕಟ್ಟೆಯ ಸಾಂತಪ್ಪ ಗೌಡರ ಮಗಳಿಗೆ ಚೂರಿ ತೋರಿಸಿ ಹೆದರಿಸಿದ ಪ್ರಕರಣ ಸಂಬಂಧ, ಪೊಲೀಸರು ತಪ್ಪಿತಸ್ತರ ಮೇಲೆ ಕಾನೂನು ಕ್ರಮ ಜರುಗಿಸದೆ ದೂರುದಾರರ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಚಾರವನ್ನು ಪ್ರಶ್ನಿಸಿ, ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. 

ಇದರೊಂದಿಗೆ ವಿಧಾನಸಭೆ ವಿ.ಪಕ್ಷ ನಾಯಕಆರ್.ಅಶೋಕ್, ಪರಿಷತ್ತಿನ ವಿ.ಪಕ್ಷದ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ, ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರಿಗೂ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರು, ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ & ಹುಡುಗಿಯ ಚಿಕ್ಕಪ್ಪ ಪುರುಷೋತ್ತಮ ಮುಂಗ್ಲಿಮನೆ, ತಂದೆ ಸಾಂತಪ್ಪ ಗೌಡ ವಾಲ್ತಾಜೆ, ಹುಡುಗಿಯ ಮಾವ, ಕಬಕ ಬಿಜೆಪಿ ಶಕ್ತಿ ಕೇಂದ್ರದ ನಿಕಟಪೂರ್ವ ಮುಂಖಡ ಜಯರಾಮ ನೆಕ್ಕರೆ ಹಾಗೂ ಭಾವ ಕೌಶಿಕ್ ಮೊಡಂತ್ಯಾರು ಇತರರು ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.