ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ

ನಾಡಿನಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ. ದಸರಾ ಹಬ್ಬದ ಒಂಭತ್ತನೇ ದಿನವಾದ ನವಮಿಯಂದು ಆಯುಧಗಳ ಪೂಜೆ ಮಾಡಿ ಹಬ್ಬ ಮಾಡುವುದು ಸಂಪ್ರದಾಯ. ಸಿಲಿಕಾನ್‌ ಸಿಟಿಯಲ್ಲಿ ಆಯುಧ ಪೂಜೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.

Oct 11, 2024 - 10:17
ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ

ನಾಡಿನಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ. ದಸರಾ ಹಬ್ಬದ ಒಂಭತ್ತನೇ ದಿನವಾದ ನವಮಿಯಂದು ಆಯುಧಗಳ ಪೂಜೆ ಮಾಡಿ ಹಬ್ಬ ಮಾಡುವುದು ಸಂಪ್ರದಾಯ. ಸಿಲಿಕಾನ್‌ ಸಿಟಿಯಲ್ಲಿ ಆಯುಧ ಪೂಜೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.ವನವಾಸಕ್ಕೆ ಹೊರಟ ಪಂಡವರು ತಮ್ಮ ಆಯುಧಗಳನ್ನ ಯಾರಿಗೂ ಕಾಣದಂತೆ ಇಟ್ಟು, ವನವಾಸ ಅಜ್ಞಾತವಾಸ ಮುಗಿಸಿದ ಬಳಿಕ ತಮ್ಮ ಆಯುಧಗಳನ್ನ ಮತ್ತೆ ತೆಗದುಕೊಂಡು ಪೂಜಿಸಿದ ದಿನವಿದು. ಹೀಗಾಗಿ, ಜನರು ತಮ್ಮ ಮನೆಗಳ ಆಯುಧಗಳನ್ನ ಶುದ್ದ ಮಾಡಿ, ಅಲಂಕಾರ ಮಾಡಿ ಪೂಜಿಸುತ್ತಾರೆ. ಜೊತೆಗೆ ವಾಹನಗಳಿಗೆ ಪೂಜೆ ಸಲ್ಲಿಸುತ್ತಾರೆ.

ಆಯುಧ ಪೂಜೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಜನ ಶಕ್ತಿ ದೇವತೆಗಳ ದರ್ಶನ ಮಾಡಿ ಆಯುಧಗಳ ಪೂಜೆ ಮಾಡಿದರು. ಬೆಂಗಳೂರು ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಬೆಳಗ್ಗೆಯಿಂದಲೇ ಸಾವಿರಾರು ಜನರ ತಮ್ಮ ವಾಹನಗಳನ್ನ ತಂದು ಪೂಜೆ ಮಾಡಿಸಿದರು.ನಗರದ ಕಾಳಿ ದೇವಿ ಬಂಡೆಮಹಾಕಾಳಿ ದೇವಾಲಯದಲ್ಲಿ ಭಕ್ತರ ಸಾಗರವೇ ತುಂಬಿತ್ತು. ಮಹಾಕಾಳಿ ದೇವಿಯ ಆಯುಧಗಳನ್ನ ದೇವಾಲಯದಲ್ಲಿ ವಿಶೇಷ ಹೋಮ ಮಾಡಿ, ಪೂಜಿಸಲಾಯಿತು. ದೇವಾಲಯದಲ್ಲಿ ಭಕ್ತರು ದೇವಿ ದರ್ಶನ ಪಡೆದು, ಆಯುಧ ಪೂಜೆಯಂದು ತಮಗೂ ಒಳಿತನ್ನ ಮಾಡಲಿ ಎಂದು ತಾಯಿಯ ಬಳಿ ಬೇಡಿಕೊಂಡರು. ನಾಳೆ ದಶಮಿಯ ಪ್ರಯುಕ್ತ, ದೇವಾಲಯದ ಆವರಣದಲ್ಲಿ ಬನ್ನಿ ಮರ ಕಡೆದು, ಪಟ್ಟದ ತಾಯಿಯ ಮೆರವಣಿಗೆ ಮಾಡಲಿದ್ದಾರೆ. 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.