ಪುತ್ತೂರು: ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

Sri Ramakrishna High School: ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ.

Jul 21, 2026 - 21:31
Jul 22, 2026 - 07:48
ಪುತ್ತೂರು: ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ಮಾದಕ ದ್ರವ್ಯಗಳ ದುರುಪಯೋಗ ಮತ‍್ತು ಅಕ್ರಮ ಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನ 2026ರ ಅಂಗವಾಗಿ ದಕ‍್ಷಿಣ ಕನ್ನಡ ಜಿಲ‍್ಲಾ ಪೊಲೀಸ್, ಪುತ‍್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ‍್ತು & ರೋಟರಿ ಕ್ಲಬ್‌ ಜಂಟಿಯಾಗಿ ವಿದ‍್ಯಾರ್ಥಿಗಳಲ‍್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದವು. 

ಇಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ (Sri Ramakrishna High School) 10ನೇ ತರಗತಿ ಬೃಂದಾ ಆರ್.ಕೆ (ಕೆಮ‍್ಮಿಂಜೆ ರಮೇಶ್ ಕೆ ಹಾಗೂ ಶೋಭಾ ಬಿ ಯವರ ಪುತ್ರಿ) ದ‍್ವಿತೀಯ ಬಹುಮಾನ ಪಡೆದುಕೊಂಡರು. 9ನೇ ತರಗತಿ ಮಾನ‍್ವಿ ಶೆಟ‍್ಟಿ (ಕೋಡಿಂಬಾಡಿ ಸುರೇಶ್ ಶೆಟ‍್ಟಿ ಮತ್ತು ಪವಿತ್ರ ಎಂ ದಂಪತಿ ಪುತ್ರಿ) ತೃತೀಯ ಬಹುಮಾನ & 10ನೇ ತರಗತಿ ಕೆ.ಆದಿತ್ಯ ಭಂಡಾರ್ಕರ್ (ನೆಲ‍್ಲಿಕಟ‍್ಟೆ ಕೆ ಅವಿನಾಶ್ ಭಂಡಾರ್ಕರ್ ಹಾಗೂ ಅಕ್ಷತಾ ಭಂಡಾರ್ಕರ್ ದಂಪತಿ ಪುತ್ರ) ಪೋತ‍್ಸಾಹಕ ಬಹುಮಾನ ಮತ‍್ತು ಪ್ರಶಂಸಾ ಪತ್ರವನ‍್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 

ಬಹುಮಾನ ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕ ಹೇಮನಾಥ ಶೆಟ‍್ಟಿ ಕಾವು ಹಾಗೂ ಪ್ರಭಾರ ಮಖ‍್ಯೋಪಾಧ‍್ಯಾಯಿನಿಯಾದ ಗಾಯತ್ರಿ ಎಸ್ ಅಭಿನಂದಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.