ಒಲಿಂಪಿಕ್ಸ್​ನಲ್ಲಿ ಕೇವಲ 6 ತಂಡಗಳಿಗೆ ಮಾತ್ರ ಅವಕಾಶ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ 12 ಪೂರ್ಣ ಸದಸ್ಯರ ತಂಡಗಳನ್ನು ಒಲಿಂಪಿಕ್ಸ್ ಸಮಿತಿಗೆ ಶಿಫಾರಸ್ಸು ಮಾಡಲಿದ್ದು, ಈ ತಂಡಗಳ ಶ್ರೇಯಾಂಕದ ಆಧಾರ ಮೇಲೆ 6 ತಂಡಗಳನ್ನು ಒಲಿಂಪಿಕ್ಸ್ ಅಂಗಳದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ವರದಿಯಾಗಿದೆ.

Apr 10, 2025 - 14:48
ಒಲಿಂಪಿಕ್ಸ್​ನಲ್ಲಿ ಕೇವಲ 6 ತಂಡಗಳಿಗೆ ಮಾತ್ರ ಅವಕಾಶ

2028 ರಲ್ಲಿ ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕೇವಲ 6 ಕ್ರಿಕೆಟ್ ತಂಡಗಳಿಗೆ ಮಾತ್ರ ಅವಕಾಶ ದೊರೆಯಲಿದೆ. 128 ವರ್ಷಗಳ ಇತಿಹಾಸ ಹೊಂದಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿ ಕ್ರಿಕೆಟ್ ಅನ್ನು ಪರಿಚಯಿಸಲಾಗುತ್ತಿದ್ದು, ಅದರಂತೆ ಪುರುಷರು ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ದೃಢಪಡಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ 12 ಪೂರ್ಣ ಸದಸ್ಯರ ತಂಡಗಳನ್ನು ಒಲಿಂಪಿಕ್ಸ್ ಸಮಿತಿಗೆ ಶಿಫಾರಸ್ಸು ಮಾಡಲಿದ್ದು, ಈ ತಂಡಗಳ ಶ್ರೇಯಾಂಕದ ಆಧಾರ ಮೇಲೆ 6 ತಂಡಗಳನ್ನು ಒಲಿಂಪಿಕ್ಸ್ ಅಂಗಳದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ವರದಿಯಾಗಿದೆ. 

ಐಸಿಸಿ ಪೂರ್ಣ ಸದಸ್ಯ ತಂಡಗಳು:
ಭಾರತ
ಅಫ್ಘಾನಿಸ್ತಾನ್
ಆಸ್ಟ್ರೇಲಿಯಾ
ಬಾಂಗ್ಲಾದೇಶ್
ಇಂಗ್ಲೆಂಡ್
ಐರ್ಲೆಂಡ್
ನ್ಯೂಝಿಲೆಂಡ್
ಪಾಕಿಸ್ತಾನ್
ಸೌತ್ ಆಫ್ರಿಕಾ
ಶ್ರೀಲಂಕಾ
ವೆಸ್ಟ್ ಇಂಡೀಸ್
ಝಿಂಬಾಬ್ವೆ

ಇದಾಗ್ಯೂ ಯಾವುದಾದರೂ ಸಹ ಸದಸ್ಯ ರಾಷ್ಟ್ರದ ತಂಡ ಮುಂದಿನ 2 ವರ್ಷಗಳ ಒಳಗೆ ಐಸಿಸಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯ ಟಾಪ್-6 ನಲ್ಲಿ ಕಾಣಿಸಿಕೊಂಡರೆ ಅವರು ಅರ್ಹತೆ ಪಡೆಯಲಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.