ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 21, 2024 - 05:43
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
              ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3

1.ಮೇಷ:
ಇಂದು ಕೇವಲ  ಶುಭಫಲಗಳು. ಉದ್ಯೋಗ ಕ್ಷೇತ್ರದಲ್ಲಿ ಹಿತಕರ ವಾತಾವರಣ. ಹೊಸ  ಹೂಡಿಕೆಗಳಿಗೆ ಅವಸರ ಬೇಡ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಗೃಹೋದ್ಯಮಗಳಿಗೆ  ಉತ್ಕರ್ಷದ ಕಾಲ. ಗಣಪತಿ ಅಥರ್ವಶೀರ್ಷ, ಶಿವಕವಚ, ನವಗ್ರಹ ಸ್ತೋತ್ರ ಓದಿ.

2.ವೃಷಭ:
ಹೊಸ ವ್ಯವಹಾರದಲ್ಲಿ ತೃಪ್ತಿಕರ ಲಾಭ. ಕೃಷ್ಯುತ್ಪಾದನೆಗಳಿಂದ ಮಧ್ಯಮ ಲಾಭ. ಸರಕಾರಿ ಅಧಿಕಾರಿಗಳಿಗೆ ಸ್ವಲ್ಪ ನೆಮ್ಮದಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.

3.ಮಿಥುನ:
ಧೈರ್ಯವೊಂದೇ  ನಿಮ್ಮ ಮಿತ್ರ ಉದ್ಯೋಗ ಸ್ಥಾನದಲ್ಲಿ   ಹಿತಶತ್ರುಗಳ  ಕಾಟ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು. ಸಮಗ್ರ  ಅಭಿವೃದ್ಧಿಯ ಹೊಸ ಪರ್ವ ಆರಂಭ. ಎಲ್ಲರ ಆರೋಗ್ಯ ಸ್ಥಿತಿ ಉತ್ತಮ. ಗಣೇಶ ಕವಚ , ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

4.ಕರ್ಕಾಟಕ:
ದೇವತಾರ್ಚನೆಯಿಂದ  ಆನಂದಾನುಭೂತಿ. ಉದ್ಯೋಗ ಸ್ಥಾನದಲ್ಲಿ ಸಹಕಾರ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸೂಚನೆ. ಕೃಷಿಗೆ ಶಾಶ್ವತ ಜಲಮೂಲ ಲಭ್ಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

5.ಸಿಂಹ:
ಉದ್ಯೋಗ, ಉದ್ಯಮದ ಎರಡರಲ್ಲೂ ಗಣನಾರ್ಹ ಪ್ರಗತಿ. ಉತ್ಪನ್ನಗಳ   ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳಿಂದ  ಉತ್ತಮ ಆದಾಯ. ವ್ಯವಹಾರಕ್ಕಾಗಿ ಸಣ್ಣ ಪ್ರಯಾಣ  ಸಂಭವ. ಗೃಹಿಣಿಯರಿಗೆ ಸಂತೃಪ್ತಿಯ ಮನೋಭಾವ,ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:
ಕ್ಷುದ್ರ  ಆಮಿಷಗಳಿಗೆ ಬಲಿಯಾಗದಿರಿ ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿಯ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

7.ತುಲಾ:
ಸಕಾರಾತ್ಮಕ ಚಿಂತನೆ ಇರಲಿ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಹೆಸರು ಕೆಡಿಸುವ ಸಂಚು. ಮಹಿಳೆಯರ ಸ್ವಾವಲಂಬನೆ ಯೋಜನೆಗಳಿಗೆ ಲಾಭದಾಯಕ ಪ್ರಗತಿ. ಎಲ್ಲರ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

8.ವೃಶ್ಚಿಕ:
ವೈಭವದ ತುತ್ತತುದಿಗೇರದಿದ್ದರೂ  ಪ್ರಗತಿಗೆ ಕೊರತೆ ಇರಲಾರದು. ಮಕ್ಕಳ ಉದ್ಯಮದ  ಕೀರ್ತಿ ವರ್ಧನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ದೂರದಲ್ಲಿರುವ ಬಂಧುಗಳ ಆಗಮನ. ಹಿರಿಯರಲ್ಲಿ ನವೋತ್ಸಾಹ. ಗಣೇಶ ಕವಚ, ಸುಬ್ರಹ್ಮಣ್ಯ ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

9.ಧನು:
ಉದ್ಯೋಗ ಸ್ಥಾನದಲ್ಲಿ  ಅನುಕೂಲ ವಾತಾವರಣ. ಸ್ವಂತ ಉದ್ಯಮ ಸ್ಥಿರವಾದ  ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ  ಹೂಡಿಕೆಯಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ನಷ್ಟ ಸಂಭವ. ಗೃಹೋದ್ಯಮಗಳಿಂದ ತೃಪ್ತಿಕರ ಲಾಭ. ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ಗುರುಸ್ತೋತ್ರ ಓದಿ.

10.ಮಕರ:
ಅವಧಿಗೆ ಮೊದಲೇ  ಕಾರ್ಯ ಮುಗಿಸಿದ ತೃಪ್ತಿ. ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ  ಲಾಭ. ತೋಟಗಾರಿಕೆಯಲ್ಲಿ ಆಸಕ್ತಿ. ಹತ್ತಿರದ  ದೇವಾಲಯಕ್ಕೆ ಸಂದರ್ಶನ. ಹಿರಿಯರು,ಮಹಿಳೆಯರು, ಮಕ್ಕಳಿಗೆ ನೆಮ್ಮದಿಯ ದಿನ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ನವಗ್ರಹ ಸ್ತೋತ್ರ ಓದಿ.


11.ಕುಂಭ:
ಉದ್ಯೋಗ, ವ್ಯವಹಾರಗಳು  ನಿರಾತಂಕ. ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ಶನಿಸ್ತೋತ್ರ ಓದಿ.


12.ಮೀನ:
ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ಕಲಿತ ವಿದ್ಯೆ ಬೋಧನೆಯಿಂದ ತೃಪ್ತಿ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಗುರುಗಳ ಅಥವಾ ಗುರುಸಮಾನರ ಭೇಟಿಯ ಸಾಧ್ಯತೆ. ಗಣೇಶ ಕವಚ, ಸುಬ್ರಹ್ಮಣ್ಯ ಕವಚ, ದೇವೀಸ್ತೋತ್ರ ಓದಿ.